Focus News
Trending

ಪದ್ಮಶ್ರೀ ಚಿಟ್ಟಾಣಿ ಪ್ರಶಸ್ತಿ ಪ್ರಧಾನ ಸಮಾರಂಭ: ಹಿರಿಯ ಭಾಗವತರಾದ ಕಪ್ಪೆಕೆರೆ ಸುಬ್ರಾಯ ಭಾಗವತರಿಗೆ ಒಲಿದ ಪ್ರಥಮ ವರ್ಷದ ಪ್ರಶಸ್ತಿ

ಹೊನ್ನಾವರ: ಯಕ್ಷಗಾನ ಕಲಾವಿದ ಪದ್ಮಶ್ರೀ ಪುರಸ್ಕ್ರತ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ 4 ನೇ ವರ್ಷದ ಪುಣ್ಯ ತಿಥಿಯ ಅಂಗವಾಗಿ ಹೊನ್ನಾವರ ತಾಲೂಕಿನ ಹೊಸಾಕುಳಿ ಲಕ್ಷ್ಮೀ ನಾರಾಯಣ ಸಭಾಭವನದಲ್ಲಿ ಪ್ರಥಮ ವರ್ಷದ ಪದ್ಮಶ್ರೀ ಚಿಟ್ಟಾಣಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು, ಕಾರ್ಯಕ್ರಮದ ಉದ್ಘಾಟನೆಯನ್ನು ವೇದಮೂರ್ತಿ ಶಿವರಾಮ ಭಟ್ಟ ಅಲೇಖ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿ ಯಕ್ಷಗಾನದಲ್ಲಿ ಎಲ್ಲಾ ಪಾತ್ರವನ್ನು ಸರಿಯ್ಯಾಗಿ ನಿರ್ವಹಿಸಿದವರು ಚಿಟ್ಟಣಿಯವರು ಯಕ್ಷ ಸಾರ್ಮಾಟನಾಗಿ ಮಿಂಚಿದ್ದಾರೆ, ಅವರ ಹೆಸರಿನ ಪ್ರಶಸ್ತಿಯನ್ನು ಕಪ್ಪೆಕೆರೆ ಸುಬ್ರಾಯ ಬಾಗವತರಿಗೆ ನೀಡುತ್ತಿರುವುದು ಉತ್ತಮ ಕಾರ್ಯ ಇಂತಹ ಕಾರ್ಯಕ್ರಮಗಳು ಹೀಗೆ ಮುಂದುವರಿಯಲಿ ಎಂದು ಹಾರೈಸಿದರು,

ಪ್ರಾಸ್ತಾವಿಕ ಮಾತನಾಡಿದ ಸುಬ್ರಹ್ಮಣ್ಯ ಚಿಟ್ಟಣಿ , ಮೂಲತ ನಮ್ಮ ತಂದೆ ಹೊಸಾಕುಳಿ ರಾಮಚಂದ್ರ ಹೆಗಡೆ ಆಮೇಲೆ ಚಿಟ್ಟಾಣಿ ರಾಮಚಂದ್ರ ಹೆಗಡೆ. ಹಾಗಾಗಿ ಚಿಟ್ಟಾಣಿಯವರ ಹೆಸರಿನ ಪ್ರಶಸ್ತಿಯನ್ನ ಪ್ರಾರಂಭಿಸೋಣ ಎನ್ನುವ ಆಶಯ ತುಂಬಿಕೊoಡಿತ್ತು. ಹಾಗಾಗಿ ಚಿಟ್ಟಾಣಿಯವರ ಕುಲದೇವರ ದೇವಸ್ಥಾನ ಹೊಸಾಕುಳಿಯ ಹುಟ್ಟೂರಿನಲ್ಲಿ ಪ್ರಶಸ್ತಿ ಪ್ರಾರಂಭಿಸಿದ್ದೇವೆ.. ದೇವರ ಅನುಗ್ರಹದಿಂದ ಸದಾ ನಡೆಯುತ್ತಿರಲಿ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಚಿಟ್ಟಾಣಿಯವರು ಅಪ್ರತಿಮ ಶಕ್ತಿಯಾಗಿದ್ದರು. ಬಹುದೊಡ್ಡ ಪ್ರೇಕ್ಷಕರನ್ನು ಸೃಷ್ಠಿಸಿ ಯಕ್ಷಗಾನ ಕುಟುಂಬವನ್ನು ಬಹುದೊಡ್ಡವಾಗಿಸಿದ ಕೀರ್ತಿ ಚಿಟ್ಟಾನಿಯವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಪ್ಪೆಕೆರೆ ಸುಬ್ರಾಯ ಭಾಗವತ ದಂಪತಿಗಳನ್ನು ಸನ್ಮನಿಸಿ ಪದ್ಮಶ್ರೀ ಚಿಟ್ಟಾಣಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವೇದಿಕೆಯಲ್ಲಿ ಹೊಸಾಕುಳಿ ಗ್ರಾಮ ಪಂಚಾಯತ ಅಧ್ಯಕ್ಷೆ ನಾಗರತ್ನ ನಾಯ್ಕ, ಉದ್ಯಮಿ ವೆಂಕಟ್ರಮಣ ಹೆಗಡೆ, ಕೆ ಸುರೇಶ, ನ್ಯಾಯವಾದಿ ಸತೀಶ ಭಟ್ಟ ಉಳ್ಗೆರೆ, ಗಣೇಶಮೂರ್ತಿ ನವಿಲಗೋಣ. ಸಿ ಜಿ ಹೆಗಡೆ ಯಲಾಪುರ, ಜಿ ಎಸ್ ಹೆಗಡೆ, ನಾರಾಯಣ ಭಟ್ಟ, ಮುಂತಾದವರು ಇದ್ದರು,

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ?

ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ..
ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571

Back to top button