Follow Us On

WhatsApp Group
Important
Trending

ಬೈಕಿನಲ್ಲಿ ಸಾಗುತ್ತಿದ್ದ ಯುವಜೋಡಿಯ ಮೇಲೆ ಯುವತಿಯ ಪರಿಚಯಸ್ಥರು ಹಲ್ಲೆ: ಸಾರ್ವಜನಿಕರಿಂದ‌ ತರಾಟೆ

ಭಟ್ಕಳ:  ಬೈಕಿನಲ್ಲಿ ಸಾಗುತ್ತಿದ್ದ ಯುವಜೋಡಿಯ ಮೇಲೆ ಯುವತಿಯ ಪರಿಚಯಸ್ಥರು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಪಟ್ಟಣದ ಮನ್ಕುಳಿ ಪೆಟ್ರೋಲ್ ಪಂಪ್ ಎದುರು ರಾಜಸ್ತಾನದ ಮೂಲದ ಯುವಕನೊರ್ವ ಗುಳ್ಮಿಯ ಯುವತಿಯನ್ನು ಕರೆದುಕೊಂಡು ಹೋಗಲು ಅಟೋ ರಿಕ್ಷಾವೊಂದನ್ನು ಕರೆಸಿದ್ದಾನೆ. ಯುವತಿ ಆಟೋ ಹತ್ತಿ ಯುವಕ ತಿಳಿಸಿದ ಸ್ಥಳಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಸ್ಥಳಕ್ಕೆ ಬಂದ ಯುವತಿಯ ಪರಿಚಯಸ್ಥರು ಯುವಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಹಾಡು ಹಗಲಿನಲ್ಲಿ ಯುವಕನೊರ್ವನನ್ನು ಹೆದ್ದಾರಿ ಬದಿಯಲ್ಲಿ ಹಿಡಿದು ಥಳಿಸುತ್ತಿರುವುದನ್ನು ನೋಡಿದ ಜನ ಹಲ್ಲೆ ನಡೆಸುತ್ತಿದ್ದ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲ್ಲೆ ನಡೆಸಲು ನಿಮಗೆ ಅಧಿಕಾರ ಕೊಟ್ಟವರ‍್ಯಾರು ಎಂದು ಮಾತಿನ ಚಕಮಕಿ ನಡೆದಿದೆ.

ನಿಮಗೆ ಆಕ್ಷೇಪ ಇದ್ದರೆ ಪೊಲೀಸರಿಗೆ ದೂರು ನೀಡಿ. ಸಾರ್ವಜನಿಕವಾಗಿ ರಸ್ತೆಯಲ್ಲಿ ರಾದ್ದಾಂತ ನಡೆಸುವುದು ಯಾಕೆ ಎಂದಿದ್ದಾರೆ. ಯುವಕ ಯುವತಿ ಪರಸ್ಪರ ಒಪ್ಪಿ ಹೋಗುವಾಗ ಯುವಕನನ್ನು ಮಾತ್ರ ಥಳಿಸುತ್ತಿದ್ದರಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ?
ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ.. ನಿಮ್ಮೂರಲ್ಲೂ ಸೂಪರ್ ಮಾರ್ಕೆಟ್ ನಿರ್ಮಿಸಬೇಕೆಂದಿದ್ದರೆ, ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಇನ್ನೊಂದಿಲ್ಲ. ತಂತ್ರಜ್ಞಾನ, ಪ್ರಾಡೆಕ್ಟ್, ಲಾಜಿಸ್ಟಿಕ್ಟ್ ನಿಂದ ಹಿಡಿದು ಎಲ್ಲ ರೀತಿಯ ಬೆಂಬಲವನ್ನೂ ನಾವು ನಿಮಗೆ ನೀಡುತ್ತೇವೆ. ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571

Back to top button