Important
Trending

ಭಟ್ಕಳದಲ್ಲಿ ಮತ್ತೆ ಕಾಣಿಸಿಕೊಂಡ ಕರೊನಾ ; ಯುವತಿಯಲ್ಲಿ ಸೋಂಕು

ಕರೊನಾ ಮುಕ್ತವಾಗಿದ್ದ ಭಟ್ಕಳಕ್ಕೆ ಮತ್ತೆ ಕರೊನಾ ಎಂಟ್ರಿ
ವಿಜಯವಾಡದಿಂದ ಬಂದ ಯುವತಿಯಲ್ಲಿ ಸೋಂಕು

ಭಟ್ಕಳ: ಭಟ್ಕಳ ಕರೊನಾ ಮುಕ್ತವಾಯಿತೆಂದು ನಿಟ್ಟುಸಿರು ಬಿಡುತ್ತಿರುವಾಗಲೇ, ತಾಲೂಕಿಗೆ ಮತ್ತೆ ಕರೊನಾ ಒಕ್ಕರಿಸಿದೆ. ತಾಲೂಕಿನಲ್ಲಿ ಪತ್ತೆಯಾದ ಕರೋನಾ ಸೋಂಕಿತರೆಲ್ಲ ಗುಣ ಮುಖರಾಗಿ ಕಾರವಾರದಿಂದ ಭಟ್ಕಳಕ್ಕೆ ಮರಳಿದ್ದಾರೆ. ಸದ್ಯ ಕರೋನಾ ಮುಕ್ತವಾಗಿದ್ದ ಭಟ್ಕಳಕ್ಕೆ ಇಂದು ಇನ್ನೊಂದು ಹೊಸ ಪ್ರಕರಣ ಸೇರ್ಪಡೆಯಾಗಿದೆ. ಭಟ್ಕಳದ ಮುಗ್ದಮ್ ಕಾಲೋನಿ ಮೂಲದ ಓರ್ವ ಯುವತಿಯಲ್ಲಿ ಪ್ರಕರಣ ಪತ್ತೆಯಾಗಿದ್ದು ಈಕೆ ಮೇ 31 ರಂದು ಆಂಧ್ರಪ್ರದೇಶದ ವಿಜಯವಾಡದಿಂದ ವಾಪಸ್ಸಾಗಿದ್ದ 29 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ. ಈಕೆ ವಿಜಯವಾಡದಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದು, ಅಲ್ಲಿ ಹೋಟೆಲ್ ವೊಂದರಲ್ಲಿ ವಾಸ್ತವ್ಯ ಹೂಡಿ, ಬಳಿಕ ಕುಂದಾಪುರದವರೆಗೆ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿ, ಭಟ್ಕಳಕ್ಕೆ ಈಕೆ ಟ್ಯಾಕ್ಸಿಯಲ್ಲಿ ಬಂದಿದ್ದರು.ನಂತರ ಗಂಟಲು ದ್ರವ ಪರೀಕ್ಷೆ ನಡೆಸಿ ಹೋಂ ಕ್ವಾರೆಂಟೈನಲ್ಲಿದ್ದರು.


– ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

[sliders_pack id=”1487″]

Back to top button