ಹೊನ್ನಾವರ: ಬ್ಲ್ಯೂ ಪ್ಯಾಗ್ ಮಾನ್ಯತೆ ಪಡೆದ ತಾಲೂಕಿನ ಕಾಸರಕೋಡ ಇಕೋ ಬೀಚ್ ಕಡಲತೀರದಲ್ಲಿ ಸಮುದ್ರಪಾಲಾಗುತ್ತಿರುವ ಇಬ್ಬರನ್ನು ರಕ್ಷಿಸಿದ ಲೈಪ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ ಬಾಗಲಕೋಟೆಯಿಂದ ಆಗಮಿಸಿದ ಪ್ರವಾಸಿಗರ ತಂಡದ ಮಂಜುಳಾ ಬಿರದಾರ ಮತ್ತು ಲಕ್ಷಣ ಬಿರದಾರ ಸಮುದ್ರದಲ್ಲಿ ಕೊಚ್ಚಿ ಹೊಗುತ್ತಿದ್ದರು. ಕೂಡಲೇ ರಕ್ಷಣೆ ಧಾವಿಸಿದ ಲೈಫ್ ಗಾರ್ಡ್ಗಳಾದ ಯಶವಂತ ಮಾದೇವ ಹರಿಕಂತ್ರ, ಹಾಗೂ ವಿರೇಂದ್ರ ಬಾಬು ಅಂಬಿಗ, ಸುಬ್ರಾಯ ತಾಂಡೇಲ್ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.
ಬ್ಲ್ಯೂ ಪ್ಯಾಗ್ ಮಾನ್ಯತೆ ಪಡೆದ ಹೊನ್ನಾವರ ತಾಲೂಕಿನ ಕಾಸರಕೋಡ್ ಇಕೋ ಬೀಚ್ ಸಮುದ್ರ ತೀರದಲ್ಲಿ ಅಪಘಾತ ತಡೆಯಲು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಖ್ಯವಾಗಿ ಸಮುದ್ರದ ಸೇಫ್ ಝೋನ್ ಒಲಯದಲ್ಲಿ ರೋಪ್‌ಗಳನ್ನು ಹಾಕಲಾಗಿದೆ.
ಈ ರೋಪ್‌ಗಳೇ ಇದೀಗ ಇಬ್ಬರ ಪ್ರಾಣ ಉಳಿಸಿದ್ದು, ಪ್ರವಾಸಿಗರು ಕೊಚ್ಚಿ ಹೋಗುವುದನ್ನು ತಡೆದಿದೆ. ಇಬ್ಬರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಇರ್ವರು ಅಪಾಯದಿಂದ ಪಾರಾಗಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581