Follow Us On

WhatsApp Group
Focus News
Trending

ಭಟ್ಕಳದಲ್ಲೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ಸ್ಥಗಿತ: ಅಭಿಮಾನಿಗಳಲ್ಲಿ ನಿರಾಸೆ

ಭಟ್ಕಳ: ತಾಲೂಕಿನ ಚಿತ್ರಮಂದಿರದಲ್ಲಿ ಲೈಸನ್ಸ್ ಬಾರದ ಹಿನ್ನೆಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ಸ್ಥಗಿತಗೊಂಡಿದೆ. ಪಟ್ಟಣದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಕೋಟಿಗೊಬ್ಬ 3 ನಿಸಿಮಾ ಇಂದು ಬಿಡುಗಡೆಯಾಗಬೇಕಿತ್ತು. ಆದರೆ ಪ್ರದರ್ಶನಕ್ಕೆ ಅನುಮತಿ ಬಾರದ ಹಿನ್ನೆಲೆ ಸಿನಿಮಾ ಪ್ರದರ್ಶನ ಇಲ್ಲ ಎಂದು ಚಿತ್ರಮಂದಿರದ ಗೇಟ್​ ಗಳನ್ನು ಬಂದ್ ಮಾಡಲಾಗಿದೆ.

ಭಟ್ಕಳದಲ್ಲಿ ಮಧ್ಯಾಹ್ನ 2.45ಕ್ಕೆ ಮೊದಲ ಪ್ರದರ್ಶನ ಆರಂಭವಾಗಬೇಕಿತ್ತು. ಆದರೆ ಇಂದಿನ ಪ್ರದರ್ಶನ ಸ್ಥಗಿತಗೊಂಡಿದೆ. ಇದರಿಂದ ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ಬಂದಿದ್ದ ಕಿಚ್ಚನ ಅಭಿಮಾನಿಗಳು ಬಂದ ದಾರಿಗೆ ಸುಂಕವಿಲ್ಲವೆoದು ಮರಳಿ ಮನೆಗೆ ತೆರಳಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button