Important
Trending

ಶಿವನ ದರ್ಶನ ಪಡೆದು ಮೋಜು ಮಸ್ತಿಗೆ ಸಮುದ್ರಕ್ಕಿಳಿದರು: ಇವರು ಬದುಕಿದ್ದೆ ಪವಾಡ!

ಭಟ್ಕಳ: ಮುರ್ಡೇಶ್ವರ ಪ್ರವಾಸಕ್ಕೆ ಬಂದ ಮೂವರು ಪ್ರವಾಸಿಗರು ಸಮುದ್ರ ಅಲೆಗೆ ಕೊಚ್ಚಿ ಹೋಗುತ್ತಿದ್ದ ವೇಳೆ  ಅಲ್ಲಿನ ಲೈಫ್ ಗಾರ್ಡ್ ಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ.

ಕೋವಿಡ್ ಲಾಕ್ ಡೌನ್ ಬಳಿಕ‌ ಇದೀಗ ಮುರುಡೇಶ್ವರಕ್ಕೆ ಬರುವ ಪ್ರವಾಸಸಿಗ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಹೇಗೆ ಪ್ರವಾಸಕ್ಕೆಂದು ಬಂದ 13 ಜನರ ತಂಡ ಶಿವಮೊಗ್ಗದಿಂದ ಧರ್ಮಸ್ಥಳ, ಕೊಲ್ಲೂರು ಹಾಗೂ ವಿವಿಧ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿ ಶುಕ್ರವಾರ ಮುರುಡೇಶ್ವರಕ್ಕೆ ಬಂದಿದ್ದರು.

ಶಿವನ ದರ್ಶನ ಪಡೆದು ಮೋಜು ಮಸ್ತಿಗೆ ಸಮುದ್ರಕ್ಕಿಳಿದ್ದಾರೆ. ಈ ವೇಳೆ 13 ಜನರ ತಂಡದಲ್ಲಿ ನಾಲ್ವರು ಯುವಕರು ಸಮುದ್ರದ ಅಲೆಗೆ ಕೊಚ್ಚಿಹೋಗಿದ್ದಾರೆ.

ನಂತರ ಓರ್ವ ಈಜಿಕೊಂಡು ದಡಕ್ಕೆ ಬಂದಿದ್ದು , ಮತ್ತೆ ಮೂವರನ್ನು ಅಲ್ಲಿನ  ಬೀಚ್ ಮೇಲ್ವಿಚಾರಕ ಹಾಗೂ  ಲೈಫ್ ಗಾರ್ಡ್ ಗಳೂ ಅಡ್ವೆಂಚರ್ಸ್ ಬೋಟ್ ಮೂಲಕ ಮೂವರು ಯುವಕರನ್ನು ರಕ್ಷಣೆಗೆ ಮಾಡಿದ್ದಾರೆ.

ಲೈಪ್ ಗಾರ್ಡಗಳ ಸಮಯ ಪ್ರಜ್ನೆಯಿಂದ ಮೂರು ಜೀವ ಬದುಕಿದ್ದು ಲೈಪ್ ಗಾರ್ಡಗಳ ಸಾಹಸಕ್ಕೆ ಪ್ರವಾಸಿಗರ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕಾರ್ಯಾಚರಣೆಯಲ್ಲಿ ಬೀಚ್ ಮೇಲ್ವಿಚಾರಕ ದತ್ತಾತ್ರೇಯ ಶೆಟ್ಟಿ ,ಲೈಪ್ ಗಾರ್ಡ್ ಗಳಾದ ಕೇಶವ, ಹನುಮಂತ, ವಿಘ್ನೇಶ್ವರ, ರಾಮಚಂದ್ರ ,ಜಯರಾಮ, ಮುಂತಾದವರಿದ್ದರು.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button