ಬಿಜೆಪಿಯ ಹಿರಿಯ ನಾಯಕ, ವೈದ್ಯ ಡಾ ಎಂ‌.ಪಿ ಕರ್ಕಿ ಇನ್ನಿಲ್ಲ

ಹೊನ್ನಾವರ: ಬಿಜೆಪಿಯ ಹಿರಿಯ ನಾಯಕ ಡಾ ಎಂ‌ಪಿ ಕರ್ಕಿ ನಿಧನರಾಗಿದ್ದಾರೆ. ಹೌದು, ಬಿ.ಜೆ.ಪಿ ಹಿರಿಯ ಮುಖಂಡ , ಕುಮಟಾ ಹೊನ್ನಾವರ ವಿದಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾll ಎಂ.ಪಿ.ಕರ್ಕಿ ಇಹಲೋಕ ತ್ಯಜಿಸಿದ್ದಾರೆ.

ವಯೋಸಹಜ ಕಾಯೆಯಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಜನಸಂಘದ ಕಾಲದಿಂದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿ ಪಕ್ಷದ ಅತ್ಯಂತ ಕಷ್ಟ ಕಾಲದಲ್ಲಿ 18 ವರ್ಷಗಳ ವರೆಗೆ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾಗಿದ್ದರು.

ಒಮ್ಮೆ ರಾಜ್ಯ ಕಾರ್ಯದರ್ಶಿಯಾಗಿ 1983ಹಾಗೂ ಎರಡನೇ ಬಾರಿ 1994ರಲ್ಲಿ ಎರಡು ಬಾರು ಕುಮಟಾ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಷ್ಟಿತ ಸಂಸ್ಥೆ ಯಾದಂತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರದಲ್ಲಿ 40 ವರ್ಷಗಳ ವರೆಗೆ ಸೇವೆ ಸಲ್ಲಿಸಿರುವ ಡಾ. ಎಂ.ಪಿ ಕರ್ಕಿ(87) ಇಂದು ನಮ್ಮನ್ನೆಲ್ಲ ಅಗಲಿದ್ದಾರೆ, ಶ್ರೀಯುತರು ಪತ್ನಿ, ಪುತ್ರಿ, ಪುತ್ರ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಜಿಲ್ಲೆಯಲ್ಲಿ ಪ್ರಥಮ ಬಿಜೆಪಿ ಪ್ರಥಮ ಶಾಸಕರು ಎನ್ನುವ ಹೆಗ್ಗಳಿಕೆ ಇವರದಾಗಿತ್ತು. ತಾಲೂಕಿನ ಜನತೆಗೆ ಆರೋಗ್ಯ ಕ್ಷೇತ್ರದಲ್ಲಿಯ ತಮ್ಮನ್ನು ತೊಡಗಿಸಿಕೊಂಡಿದ್ದರು.

ತಮ್ಮ ಅವಧಿಯಲ್ಲಿ ಕುಮಟಾ ಹೊನ್ನಾವರ ಕುಡಿಯವ ನೀರಿನ ಯೋಜನೆ ನೀಡಿರುವುದು ಇವರ ಹೆಗ್ಗಳಿಕೆ.‌ ಹೊನ್ನಾವರ ಪಟ್ಟಣ ಪಂಚಾಯತ ಅದ್ಯಕ್ಷರಾಗಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Exit mobile version