ಅಂಕೋಲಾ ಅ 22: ಹಲ್ಲೆ ಮತ್ತು ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಿಗೆ ಅಂಕೋಲಾ ಪ್ರಥಮ ದರ್ಜೆ ನ್ಯಾಯಾಲಯವು ಶಿಕ್ಷೆಯನ್ನು ಪ್ರಕಟಿಸಿದೆ.
ಜಮೀನಿನ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಹಟ್ಟಿಕೇರಿಯ ಬಾಲಚಂದ್ರ ಬಾಬು ಗುನಗ(57) ಈತನ ವಿರುದ್ಧ 20 ಅಕ್ಟೋಬರ 2015 ರಂದು ಹಲ್ಲೆ ಮತ್ತು ಕೊಲೆ ಬೆದರಿಕೆ ಕೇಸು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಪ್ರಥಮ ದರ್ಜೆ ಜೆ.ಎಮ್.ಎಫ್.ಸಿ ಅಂಕೋಲಾದ ನ್ಯಾಯಾಧೀಶರಾದ ಜೆ.ರಂಗಸ್ವಾಮಿ ಆರೋಪಿತನ ವಿರುದ್ಧ ಅಪರಾಧ ಸಾಬೀತಾಗಿದ್ದರಿಂದ ಈ ಕೆಳಗಿನಂತೆ ಶಿಕ್ಷೆಯನ್ನು ಪ್ರಕಟಿಸಿರುತ್ತಾರೆ.
ಐಪಿಸಿ 326 ಪ್ರಕಾರ ರೂ.1000 ದಂಡ ಹಾಗೂ 2 ವರ್ಷ ಸೆರೆವಾಸ, ಐಪಿಸಿ 447 ಪ್ರಕಾರ ರೂ.300 ದಂಡ ಹಾಗೂ 1 ತಿಂಗಳು ಸೆರೆವಾಸ, ಐಪಿಸಿ 504 ಪ್ರಕಾರ ರೂ.500 ದಂಡ ಹಾಗೂ 6 ತಿಂಗಳು ಸೆರೆವಾಸ, ಐಪಿಸಿ 506 ಪ್ರಕಾರ ರೂ.500 ದಂಡ ಹಾಗೂ 6 ತಿಂಗಳು ಸೆರೆವಾಸ ಶಿಕ್ಷೆ ನೀಡಿ ಆದೇಶಿಸಲಾಗಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಗಿರೀಶ ಎನ್ ಪಟಗಾರ ವಾದಿಸಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ