Focus News
Trending

ಯುಥ್ ಕಾಂಗ್ರೆಸ್ ಘಟಕದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮ ದಿನಾಚರಣೆ

ಅಂಕೋಲಾದಲ್ಲಿ ಗಿಡ ನೆಡುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ
ಸತೀಶ ಕೆ.ಸೈಲ್ ‌ರಿಂದ ಚಾಲನೆ

[sliders_pack id=”3491″]

ಅಂಕೋಲಾ: ಮಾಜಿ ಮುಖ್ಯಮಂತ್ರಿಗಳು ಮತ್ತು ವಿರೋಧಪಕ್ಷದ ನಾಯಕರು ಹಾಗೂ ಕಾಂಗ್ರೆಸ್‌ನ ಹಿರಿಯ ಧುರೀಣರಾದ ಸಿದ್ಧರಾಮಯ್ಯನವರ ಹುಟ್ಟು ಹಬ್ಬವನ್ನು ತಾಲೂಕಾ ಯುವ ಕಾಂಗ್ರೆಸ್ ಘಟಕದ ವತಿಯಿಂದ ‘ಗಿಡ ನೆಡುವ ಮೂಲಕ’ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸೈಲ್‌ರಿಂದ ಚಾಲನೆ : ಬುಧವಾರ ಜೈಹಿಂದ್ ಮೈದಾನದಲ್ಲಿ ನಡೆದ ಈ ಸರಳ ಕಾರ್ಯಕ್ರಮವನ್ನು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮತ್ತು ಕಾಂಗ್ರೆಸ್ ಟಾಸ್ಕ್ಪೋರ್ಸ್ ಸಮಿತಿಯ ಜಿಲ್ಯಾಧ್ಯಕ್ಷ ಸತೀಶ ಕೆ.ಸೈಲ್ ಸಸಿ ನೆಡುವ ಮೂಲಕ ಹಸರೀಕರಣಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ನಮ್ಮೆಲ್ಲರ ನಾಯಕರಾಗಿರುವ ಸಿದ್ಧರಾಮಯ್ಯ, ಈ ರಾಷ್ಟ್ರಕಂಡ ಉತ್ತಮ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು, ಅವರು ನೂರುಕಾಲ ಬಾಳುವಂತಾಗಿ, ನಾಡಿನ ಜನತೆಗೆ ಇನ್ನಷ್ಟು ಸೇವೆ ನೀಡುವಂತಾಗಲಿ ಎಂದು ಪ್ರಾರ್ಥಿಸಿ, ಉತ್ತಮ ಕಾರ್ಯಕ್ರಮ ಸಂಘಟಿಸಿದ ಉತ್ಸಾಹಿ ತರುಣ, ಮಂಜುನಾಥ ವಿ ನಾಯ್ಕ ನೇತೃತ್ವದ ಯುಥ್ ಕಾಂಗ್ರೆಸ್‌ನ ಎಲ್ಲಾ ಪದಾಧಿಕಾರಿಗಳ ಶ್ರಮವನ್ನು ಶ್ಲಾಘಿಸಿದರು. ©Copyright reserved by Vismaya tv

ಪ್ರಮುಖರು : ರಮಾನಂದ ಬಿ ನಾಯಕ, ಪಾಂಡುರoಗ ಗೌಡ, ಸಮೀರ ನಾಯ್ಕ, ಸುಜಾತ ಗಾಂವಕರ ಬಿ.ಡಿ ನಾಯ್ಕ, ವಿನೋದ ಡಿ. ನಾಯ್ಕ, ವಿನೋದ ನಾಯಕ ಬಾಸಗೋಡ, ಮಂಜೇಶ್ವರ ನಾಯಕ ಬೇಲೇಕೇರಿ ವಿಶ್ವನಾಥ ಟಿ. ನಾಯ್ಕ ಮಂಜುನಾಥ ಎಸ್ ನಾಯ್ಕ, ಸುರೇಶ ಅಸ್ಲಗದ್ದೆ, ಸುದೀಪ ಬಂಟ್, ನಾಗೇಂದ್ರ ನಾಯ್ಕ, ಮಂಜೇಶ್ವರ ನಾಯಕ, ಪ್ರದೀಪ ವಾಸರೆ, ಸುಂದರ ಖಾರ್ವಿ, ದೀಕ್ಷಿತ ನಾಯಕ ಮಾರುತಿ ನಾಯ್ಕ ಅವರ್ಸಾ ವಿನೋದ ನಾಯ್ಕ ಅವರ್ಸಾ, ಪುರುಷೋತ್ತಮ ನಾಯ್ಕ, ಆನಂದು ಗಾಂವಕರ, ದೀಪಾಲಿ ಎಮ್. ನಾಯ, ದರ್ಶನ ನಾಯ್ಕ, ವಿನೋದ ಗಾಂವಕರ ಅಲಗೇರಿ,ವಿಜು ಪಿಳ್ಳೆ,ಸಂತೋಷ ನಾಯ್ಕ ಬಾಳೆಗುಳಿ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button