Important
Trending

ಕುಮಟಾದಲ್ಲಿ ಮತ್ತೆ ಕಾಣಿಸಿಕೊಂಡ ಕರೊನಾ

ಕುಮಟಾ: ಕುಮಟಾದಲ್ಲಿ ಹಲವುದಿನಗಳ ಬಿಡುವಿನ ಬಳಿಕ ಮತ್ತೆ ಕರೊನಾ ಪ್ರತ್ಯಕ್ಷವಾಗಿದ್ದು, 56 ವರ್ಷದ ಪುರುಷದಲ್ಲಿ ಸೋಂಕು ದೃಢಪಟ್ಟಿದೆ. ಈತ ಮಹಾರಾಷ್ಟ್ರದಿಂದ ಬಂದಿದ್ದು, ಕ್ವಾರಂಟೈನ್‍ನಲ್ಲಿದ್ದರು. ಮಹಾರಾಷ್ಟ್ರದಿಂದ ಬರುವಾಗಲು, ಯಾವುದೇ ಸಾರ್ವಜನಿಕ ಸಾರಿಗೆ ಬಳಸದೆ, ಕಾರಿನಲ್ಲಿ ಬಂದಿದ್ದು, ಕಟ್ಟಿನಿಟ್ಟಿನ ಕ್ವಾರಂಟೈನ್ ನಿಯಮ ಪಾಲಿಸಿದ್ದರು. ಹೊರರಾಜ್ಯದಿಂದ ಬಂದ ಹಿನ್ನಲೆಯಲ್ಲಿ ಇವರ ಗಂಟಲುದ್ರವದ ಮಾದರಿಯನ್ನು ಸಂಗ್ರಹಿಸಿ, ಕಳುಹಿಸಿಕೊಡಲಾಗಿತ್ತು.(@ವಿಸ್ಮಯ ಟಿ.ವಿ) ಇಂದು ಇವರ ವರದಿ ಪಾಸಿಟಿವ್ ಬಂದಿದೆ ಎನ್ನಲಾಗಿದ್ದು, ಕಾರವಾರದ ಕರೊನಾ ವಾರ್ಡಿಗೆ ರವಾನಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆಯ ವರದಿ ಬಂದ ಬಳಿಕ ಮಾಹಿತಿ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

[sliders_pack id=”1487″]

Back to top button