Uttara Kannada
Trending

10 ಸಾವಿರ ಮಾಸ್ಕ ವಿತರಿಸಿದ ಸತೀಶ್ ಸೈಲ್ & ಟೀಮ್

ಕಾರವಾರ : ದ್ವಿತೀಯ ಪಿಯುಸಿ ಪರೀಕ್ಷೆ ಜೂನ್ 18 ರಂದು ನಡೆಯಲಿದ್ದು, ಇಲಾಖೆ ಪರೀಕ್ಷೆ ಸಿದ್ದತೆ ನಡೆಸುತ್ತಿದೆ. ಜಿಲ್ಲೆಯಲ್ಲಿ 30 ಪರೀಕ್ಷೆ ಕೇಂದ್ರಗಳಿದ್ದು, ಎಲ್ಲಾ ಕೇಂದ್ರಗಳಿಗೆ ತಲಾ 5 ಲೀ.ಸೆನಿಟೈಜರ್ ಮತ್ತು ಒಟ್ಟಾರೆ ಯಾಗಿ 10,500 ಮಾಸ್ಕಗಳನ್ನು, ಮಾಜಿ ಶಾಸಕ ಸತೀಶ ಸೈಲ್ ನೇತೃತ್ವದ ಕಾರವಾರದ ಗಿರಿಜಾ ಬಾಯಿ ಸೈಲ್ ಇಂಜಿನಿಯರಿಂಗ್ ಕಾಲೇಜ್ ಆಡಳಿತ ಮಂಡಳಿಯವರು, ಅಂಕೋಲಾ ನವಗದ್ದೆಯ ಪ್ರಕೃತಿ ಪ್ರೊಡಕ್ಟ್ ಸಹಯೋಗದಲ್ಲಿ ಕಾರವಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಹಸ್ತತಾಂತರಿಸಿದರು‌.

ಪಿಯುಸಿ ಪರೀಕ್ಷೆ ಮುಂದೂಡಲ್ಪಟ್ಟದ್ದರಿಂದ ಸಹಜವಾಗಿಯೇ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಆದರೂ ಉತ್ತರ ಕನ್ನಡಿಗರು ಬಲಾಡ್ಯರಿದ್ದು, ಪರಿಸ್ಥಿತಿಯನ್ನು ಸ್ಥಿರವಾಗಿ ಎದುರಿಸುತ್ತಾರೆ. ಉತ್ತಮ ಫಲಿತಾಂಶ ನಮ್ಮ ಜಿಲ್ಲೆಯಲ್ಲಿ ದಾಖಲಾಗಲಿದೆ ಎನ್ನುವ ವಿಶ್ವಾಸವಿದೆ. – -ಸತೀಶ ಕೆ.ಸೈಲ್ , ಮಾಜಿ ಶಾಸಕರು ಮತ್ತು ಕಾಂಗ್ರೆಸ್ ಟಾಸ್ಕಪೋರ್ಸ್ ಸಮಿತಿ ಜಿಲ್ಲಾಧ್ಯಕ್ಷರು

ಜಿಲ್ಲೆಯ ಬಹುತೇಕ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೀಡಲಾದ 10 ಸಾವಿರಕ್ಕೂ ಹೆಚ್ಚು ಮಾಸ್ಕ ಮತ್ತು 150 ಲೀ.ಸೆನಿಟೈಜರ್ ಸ್ವೀಕರಿಸಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ.ಎನ್.ಬಗಲಿ, ನಮ್ಮ ಇಲಾಖೆ ಮತ್ತು ಶೈಕ್ಷಣಿಕ ಕಾರ್ಯಗಳಲ್ಲಿ ಸದಾ ಸಹಾಯ ಸಹಕಾರ ನೀಡುತ್ತಾ ಬಂದಿರುವ ಸೈಲ್ ಮತ್ತು ತಂಡದವರು ಪಿಯು ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿ ಗಳಿಗೆ ಸುರಕ್ಷತಾ ಮಾಸ್ಕ ಮತ್ತು ಸೆನಿಟೈಜರ್ ನೀಡಿದ್ದು, ಇಲಾಖೆ ವತಿಯಿಂದ ಧನ್ಯವಾದ ತಿಳಿಸಿದರು.

ಜಿಲ್ಲೆಯ ಪಿಯು ವಿದ್ಯಾರ್ಥಿಗಳಿಗೆ 10,500 ಮಾಸ್ಕ ಮತ್ತು ತಲಾ ಪರೀಕ್ಷೆ ಕೇಂದ್ರಕ್ಕೆ 5 ಲೀ, ಸೆನಿಟೈಜರ್ ನೀಡಲು ಹೆಮ್ಮೆ ಎನಿಸುತ್ತದೆ. ಪ್ರಕೃತಿ ಪ್ರೊಡಕ್ಟ್ ವತಿಯಿಂದ ಡಾ.ಪ್ರಥ್ವಿ ಶೆಟ್ಟಿ ಮತ್ತಿತ ರರು ಸಹಕರಿಸಿದ್ದಾರೆ ಎಂದು ಹೇಳಿ ಎಲ್ಲಾ ವಿದ್ಯಾರ್ಥಿಗಳಿಗೆ ಹಾರೈಕೆ. -ಸಾಧ್ವಿ ಸೈಲ್, ಗಿರಿಜಾ ಬಾಯಿ ಸೈಲ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕಿ ಮತ್ತು ಸತೀಶ ಸೈಲ್ ಪುತ್ರಿ

ಈ ಸಂದರ್ಭದಲ್ಲಿ ಸಮೀರ ನಾಯ್ಕ, ಮೋಹನ ನಾಯ್ಕ, ಪ್ರಭಾಕರ ಮಾಳ್ಸೇಕರ್, ಕಾರ ವಾರ ವಿವಿಧ ಪಿಯು ಕಾಲೇಜ್ ಪ್ರಾಚಾರ್ಯರಾದ ಪ್ರಕಾಶ ರಾಣೆ, ಸ್ಯಾನಿ ಪಿಂಟೋ, ರಮೇಶ ಪತ್ರೇಕರ್, ಎ.ಸಿ.ಗಾಂವಕರ,ಪಿ.ಕೆ.ಜಾಪಗಾಂವಕರ, ಸರ‍್ಯವಂಶಿ, ಮತ್ತಿತರರು ಉಪಸ್ಥಿತರಿದ್ದರು. ಕಾರವಾರ ಸಿದ್ದರದ ಮಲಿಕರ‍್ಜುನ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಪಿ.ನಾಯಕ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು.
-ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

[sliders_pack id=”1487″]

Back to top button