ಯುವಾ ಬ್ರಿಗೇಡ್ ನಿಂದ ಸರಕಾರಿ ಪ್ರೌಢಶಾಲೆ ಬೆಲೆಗದ್ದೆ ತದಡಿಯಲ್ಲಿ ಮಕ್ಕಳಿಗೆ ಟ್ಯಾಬ್ ನೀಡುವ ಮೂಲಕ ಕೈಹಿಡಿದು ನಡೆಸೆನ್ನನು ಕಾರ್ಯಕ್ರಮ

ಗೋಕರ್ಣ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಸರಕಾರಿ ಪ್ರೌಢಶಾಲೆ ಬೆಲೆಗದ್ದೆ ತದಡಿಯಲ್ಲಿ ಮಕ್ಕಳಿಗೆ ಟ್ಯಾಬ್ ನೀಡುವ ಮೂಲಕ ಕೈಹಿಡಿದು ನಡೆಸೆನ್ನನು ಎನ್ನುವ ಕಾರ್ಯಕ್ರಮ ಮಾಡಲಾಯಿತು. ಈ ಸಂಧರ್ಭದಲ್ಲಿ ಉದ್ಘಾಟಕರಾಗಿ ಆಗಮಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಾಜೇಂದ್ರ ಭಟ ¸ಅವರು ಮಾತನಾಡಿ ಯುವಾ ಬ್ರಿಗೇಡ್ ಕುಮಟಾ ಕೆಲಸವನ್ನು ಶ್ಲಾಘಿಸಿದರಲ್ಲದೆ ಯೋಜನೆನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು,

ಶಾಲೆಯ ಮುಖ್ಯೋಪಾಧ್ಯಾಯರಾದ ರವಿಕಲಾ ನಾಯ್ಕ ಅವರು ಈ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವದಾಗಿ ಬರವಸೆ ನೀಡಿದರು ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ತಾಲೂಕ ಸಂಚಾಲಕರಾದ ಪ್ರಕಾಶ ನಾಯ್ಕ ಹಾಗೂ ಮಂಗಳೂರು ವಿಭಾಗ ಸಂಚಾಲಕರಾದ ಅಣ್ಣಪ್ಪ ನಾಯ್ಕ, ಜಿಲ್ಲಾ ಸಂಚಾಲಕರಾದ ಸತೀಶ ಪಟಗಾರ, ಸದಸ್ಯರಾದ ಕಿಶೋರ್, ರವೀಶ, ಬಬ್ಲು, ಲಕ್ಷ್ಮಿಕಾಂತ್, ಅಶೋಕ ಹಾಗೂ ಉಪಾಧ್ಯಕ್ಷರು, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿದ ರೋಟರಿ ಕ್ಲಬ್ ಕುಮಟದ ಕಾರ್ಯದರ್ಶಿಗಳಾದ ಅತುಲ್ ಕಾಮತ್ ಇದ್ದರು.

ವಿಸ್ಮಯ ನ್ಯೂಸ್, ಕುಮಟಾ

Exit mobile version