Join Our

WhatsApp Group
Important
Trending

ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡ ಕೆಲವೇ ಸಮಯದಲ್ಲೇ ಕುಸಿದುಬಿದ್ದ: ಪಕ್ಕದ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ನಿಧನ

ಅಂಕೋಲಾ: ತಾಲೂಕಿನ ಕೆ.ಸಿ. ರಸ್ತೆಯಂಚಿನ ನಿವಾಸಿ ( ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರು) ಕಿರಣ . ಡಿ. ಬೋರ್ಕರ್ (42) , ಅಕಾಲಿಕ ನಿಧನ ಹೊಂದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದ ಕಿರಣ್,ಇತ್ತೀಚಿಗೆ ಅಲ್ಲಿಯ ಅಪಾರ್ಟ್ಮೆಂಟ್ ಒಂದರಲ್ಲಿ ಮನೆಯನ್ನು ಖರೀದಿಸಿ,ಹೆಂಡತಿ ಹಾಗೂ ಮುದ್ದಾದ ಮಗುವಿನೊಂದಿಗೆ ಸುಂದರ ಸಂಸಾರ ಕಟ್ಟಿಕೊಂಡಿದ್ದರು.

ಕಾರ್ಯನಿಮಿತ್ತ ಉಡುಪಿಗೆ ಹೋಗಿದ್ದ ಅವರು, ಅದೇ ವೇಳೆ ತನಗೆ ಆಗಿರಬಹುದಾದ ಅನಾರೋಗ್ಯ ಲಕ್ಷ್ಮಣ ಇಲ್ಲವೇ, ವಾರ್ಷಿಕ ಆರೋಗ್ಯ ತಪಾಸಣೆ ಉದ್ದೇಶದಿಂದ,
ತಮ್ಮ ಕುಟುಂಬದ ಪರಿಚಿತ ವೈದ್ಯರೊಬ್ಬರ ಖಾಸಗಿ ಕ್ಲಿನಿಕ್ ಗೆ ತೆರಳಿ ದೇಹಾರೋಗ್ಯ ತಪಾಸಣೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ವಿಧಿಯಾಟ ಎನ್ನುವಂತೆ ಸ್ವಲ್ಪ ಸಮಯದಲ್ಲಿಯೇ ಹೃದಯ ಸ್ಥಂಬನ ಅಥವಾ ಇನ್ನಿತರೇ ಕಾರಣಗಳಿಂದ ಅಲ್ಲಿಯೇ ಕುಸಿದು ಬಿದ್ದಂತಾಗಿ ಪಕ್ಕದ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.

ಕಿರಣ ಬೋರ್ಕರ್ ತನ್ನ ಸರಳ ನಡೆ ನುಡಿಗಳ ಮೂಲಕ ಅಪಾರ ಗೆಳೆಯರ ಬಳಗವನ್ನು ಹೊಂದಿದ್ದು, ಮಂಜು, ಬಾಳಾ, ಅಶೋಕ ಮತ್ತಿತರ ಗೆಳೆಯರು ಆತನ ಆತ್ಮೀಯತೆಯನ್ನು ಸ್ಮರಿಸಿ,ಕಂಬನಿ ಮಿಡಿದರು.

ಪದ್ಮಶ್ರೀ ಪುರಸ್ಕೃತ ತುಳಸಿಗೌಡರ ಭಾವಚಿತ್ರ ಮತ್ತು ಅವರ ವ್ಯಕ್ತಿತ್ವದ ಕುರಿತಾಗಿನ ಸಂದೇಶವನ್ನು, ಪರಿಸರ ಪರಿವಾರದ ಭಾಗವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ವೈಯಕ್ತಿಕ ಖಾತೆಯಲ್ಲಿ ಹಂಚಿಕೊಂಡು,ಅಂಕೋಲಾ ಹಾಗೂ ತುಳಸಿ ಗೌಡರ ಮೇಲಿನ ಅಭಿಮಾನ ತೋರ್ಪಡಿಸಿದ್ದ ಕಿರಣ ಅಚಾನಕ್ ಆರೋಗ್ಯ ಸಮಸ್ಯೆಯಿಂದ ಇನ್ನಿಲ್ಲದಂತೆ ಮರೆಯಾಗಿರುವುದು ದುರಂತವೇ ಸರಿ

ಹೆಂಡತಿ ,ಮಗು,ಸಹೋದರ- ಸಹೋದರಿಯರು ಹಾಗೂ ಕುಟುಂಬ ವರ್ಗ ಮತ್ತು ಅಪಾರ ಬಂಧು-ಬಳಗ ತೊರೆದಿರುವ ಕಿರಣ್ ಇನ್ನು ನೆನಪು ಮಾತ್ರ ಎನ್ನುವಂತಾಗಿದೆ. ಅಂಕೋಲದಲ್ಲಿ ಮೃತನ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು ,ನೂರಾರು ಜನರು ಬಂದು ಅಂತಿಮ ದರ್ಶನ ಪಡೆದು ಕೊಂಡರು

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button