ಕಾಣೆಯಾದ ವಿವಾಹಿತೆ: ಮೂರು ವರ್ಷದ ಮಗಳನ್ನು ಕರೆದು ಕೊಂಡು ಹೋಗುವ ಮುನ್ನ ಬರೆದಿಟ್ಟ ಪತ್ರದಲ್ಲೇನಿದೆ ?
ಅಂಕೋಲಾ: ದಿನದಿಂದ ದಿನಕ್ಕೆ ನಾನಾ ಕಾರಣಗಳಿಂದ ತಾಲೂಕು ಹಾಗೂ ಜಿಲ್ಲೆಯಲ್ಲಿ ಮಹಿಳೆಯರ ನಾಪತ್ತೆ ಪ್ರಕರಣ ಹೆಚ್ಚುತ್ತಲೇ ಇರುವುದು ಕಳವಳಕಾರಿ ಸಂಗತಿಯಾಗಿದೆ. ಅಂತಹುದೇ ಇನ್ನೊಂದು ಘಟನೆ ಅಂಕೋಲಾ ತಾಲೂಕಿನಲ್ಲಿ ನಡೆದಿದೆ.
ಪುರೋಹಿತ ಕುಟುಂಬವೊಂದರಲ್ಲಿ ಮನೆಯೊಡತಿಯಾಗಿ ಸುಖ-ಸಂಸಾರ ನಡೆಸಬೇಕಿದ್ದ (30 ರ )ವಿವಾಹಿತ ಮಹಿಳೆಯೋರ್ವಳು,ಅದಾವುದೋ ಕಾರಣದಿಂದ ತನ್ನ ಮನೆ ತೊರೆತಂತಿದೆ. ಹಿಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಂಗಳ ಬೈಲನಲ್ಲಿ ವಾಸವಾಗಿದ್ದ ಈಕೆ, ಡಿಸೆಂಬರ 3 ರ ಬುಧವಾರ ಮಧ್ಯಾಹ್ನ,ಮನೆಯವರಿಗೆ ಯಾರಿಗೂ ತಿಳಿಸದೆ ತನ್ನ 3 ವರ್ಷದ ಮಗಳೊಂದಿಗೆ ನಾಪತ್ತೆಯಾಗಿದ್ದಾಳೆ.
ಈ ಕುರಿತು ಕಾಣೆಯಾದ ತನ್ನ ಪತ್ನಿಯನ್ನು ಹುಡುಕಿ ಕೊಡುವಂತೆ ಪತಿ ಈಶ್ವರ ಕೃಷ್ಣ ಪೊಲೀಸ್ ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಕೈಗೊಂಡಿದ್ದಾರೆ.
ತಾನು ಹೊರಡುವ ಮುನ್ನ ಮನೆಯಲ್ಲಿ ಬರೆದಿಟ್ಟ ಪತ್ರದಲ್ಲಿ, ತನ್ನ ಜೊತೆಯಲ್ಲಿ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗುತ್ತಿದ್ದೇನೆ, ನನ್ನನ್ನು ಹುಡುಕಬೇಡಿ ಎಂಬಿತ್ಯಾದಿ ವಿಷಯಗಳನ್ನು ಬರೆದಿಟ್ಟಿರುವ ಕುರಿತು ದೂರಿನಲ್ಲಿ ತಿಳಿಸಲಾಗಿದೆ.
ಹೊನ್ನಾವರದಲ್ಲೂ ಮತ್ತೊಂದು ನಾಪತ್ತೆ ಪ್ರಕರಣ: ತಾಲೂಕಿನಲ್ಲಿ ವಿವಾಹಿತ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದಾಳೆ. ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿಕೊಡುವಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ ಎಂದು ತಿಳಿದುಬಂದೆ.
ತಾಲೂಕಿನ ಆರೋಳ್ಳಿಯ ಸುಬ್ರಹ್ಮಣ್ಯ ನಾಗಪ್ಪ ನಾಯ್ಕ ತನ್ನ ಹೆಂಡತಿ ಜ್ಯೋತಿ ನಾಯ್ಕ ತನ್ನ ಮನೆಯಿಂದ ಮನೆಯಲ್ಲಿರುವ ಅತ್ತೆ ಮತ್ತು ಮಾವನ ಹತ್ತಿರ ತನ್ನ ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ ಹೇಳಿದವಳು ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾರೆ
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.