Important
Trending

ಬೇಕರಿಗೆ ಬೆಂಕಿ: ಸಿಲಿಂಡರ್ ಸ್ಫೋಟದಿಂದ ಮತ್ತಷ್ಟು ಕೆನ್ನಾಲಿಗೆ ಚಾಚಿದ ಅಗ್ನಿ: ಅಪಾರ ಹಾನಿ

ಶಿರಸಿ: ಬೇಕರಿಯೊಂದಕ್ಕೆ ಬೆಂಕಿ ತಗುಲಿ ಹಾನಿಯಾದ ಘಟನೆ ತಾಲೂಕಿನ ಕೋರ್ಲಕಟ್ಟಾದಲ್ಲಿ ಬೆಳಗಿನ ಜಾವ ನಡೆದಿದೆ. ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಮಹಾಂತೇಶ್ ನಾಯ್ಕ್ ಮಾಳಂಜಿ ಎಂಬುವವರಿಗೆ ಸೇರಿದ ಬೇಕರಿ ಇದು ಎಂದು ತಿಳಿದುಬಂದಿದೆ.

ಲಕ್ಷಾಂತರ ಮೌಲ್ಯದ ಅಕ್ರಮ ಸಾಗವಾನಿ ಕಟ್ಟಿಗೆ ದಾಸ್ತಾನು; ವುಡ್ ಮಿಲ್ ಗೆ ಬಿತ್ತು ಬೀಗ ಮುದ್ರೆ| ಮಿಲ್ ಮಾಲಕ ಮತ್ತಿತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲು

ಬೇಕರಿ ಒಳಗಿದ್ದ ಸಿಲಿಂಡರ್ ಸ್ಫೋಟದಿಂದ ಮತ್ತಷ್ಟು ತೀವ್ರತರದಲ್ಲಿ ಬೆಂಕಿ ಕೆನ್ನಾಲಿಗೆ ಚಾಚಿದೆ. ಬೆಂಕಿ ಅನಾಹುತದಿಂದಾಗಿ ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಉಪಕರಣಗಳು ಸುಟ್ಟುಹೋಗಿವೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button