Focus NewsImportant
Trending

ಹೆದ್ದಾರಿ ಪಕ್ಕ ಲಾರಿಯೊಂದು ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಚಾಲಕ, ನಿರ್ವಾಹಕ

ಹೊನ್ನಾವರ: ಪಟ್ಟಣದ ಶ್ರೀದೇವಿ ಆಸ್ಪತ್ರೆಯ ಸಮೀಪ ಹೆದ್ದಾರಿ ಪಕ್ಕ ಲಾರಿಯೊಂದು ಪಲ್ಟಿಯಾಗಿದೆ. ಕುಮಟಾ ಮಾರ್ಗದಿಂದ ಭಟ್ಕಳ ಕಡೆಗೆ ಸಂಚರಿಸುತ್ತಿದ್ದ ಲಾರಿಯು ಹೆದ್ದಾರಿ ಪಕ್ಕದ ಎಡ ಭಾಗದಲ್ಲಿ ಉರುಳಿಬಿದ್ದಿದ್ದು, ಚಾಲಕ ಹಾಗೂ ನಿರ್ವಾಹಕರು ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ.

ಹೊಂಡ‌ ತಪ್ಪಿಸಲು ಹೋಗಿ ಅವಾಂತರ: ಲಾರಿಗಳ‌ ಡಿಕ್ಕಿ: ಓರ್ವ ಸಾವು

ಐ.ಆರ್. ಬಿಯವರು ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಹೆದ್ದಾರಿ ಪಕ್ಕ ಮಣ್ಣು ಸಮತಟ್ಟು ಮಾಡಿರುದರಿಂದ ವಾಹನವನ್ನು ರಸ್ತೆ ಅಂಚಿನಲ್ಲಿ ನಿಲ್ಲಿಸಲು ಹೋಗಿ ಈ ಅವಘಡ ಸಂಭವಿಸಿರಬಹುದೆoದು ಹೇಳಲಾಗುತ್ತಿದೆ. ರಸ್ತೆ ಪಕ್ಕ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button