ಕುಮಟಾ: ಭಗವದ್ಗೀತಾ ಅಭಿಯಾನದವತಿಯಿಂದ ಕುಮಟಾ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಗೀತಾ ಕಂಠಪಾಠ ಹಾಗೂ ಭಾಷಣ ಸ್ಪರ್ಧೆಯನ್ನುತಾಲೂಕಿನ ಪ್ರಾಥಮಿಕ,ಪ್ರೌಢ,ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು.
ಭಗವದ್ಗೀತಾ ಭಾಷಣಸ್ಪರ್ಧೇಯ ಪದವಿಪೂರ್ವ ವಿಭಾಗದಲ್ಲಿಕು.ಅಕ್ಷತಾ ಶಿವರಾಮ ಭಟ್ಟ.ಸರಸ್ವತಿ ಪಪೂಕಾಲೇಜು(ಪ್ರಥಮ) ಕು.ಪವಿತ್ರಾ ಪಟಗಾರ.ಹನುಮಂತ ಬೆಣ್ಣೆ ಸಪಪೂಕಾಲೇಜು ನೆಲ್ಲಿಕೇರಿ.(ದ್ವಿತೀಯ) ಕು.ರಂಜನಾ ಬಿ ಮಡಿವಾಳ.ಸರಸ್ವತಿ ಪಪೂಕಾಲೇಜು(ತೃತೀಯ) ಪ್ರೌಢಶಾಲಾ ವಿಭಾಗದಲ್ಲಿ ಕು.ಭೂಮಿಕಾ ಸತೀಶ ಭಟ್ಟ.ಸಿವಿಎಸ್‌ಕೆ(ಪ್ರಥಮ)ಕು.ಚಂದನಗಣೇಶ ಹೆಗಡೆ.ಸಿವಿಎಸಕೆ ಕಲಭಾಗ್(ದ್ವಿತೀಯ) ಕು.ಪ್ರಿಯಾ ವಿ ನಾಯ್ಕಗಿಬ್‌ಗರ್ಲ್ಸ ಪ್ರೌಢಶಾಲೆ.(ತೃತೀಯ) ಪ್ರಾಥಮಿಕ ವಿಭಾಗದಲ್ಲಿಕು.ಕೃತ್ತಿಕಾ ಮಹೇಶ ಭಟ್ಟ ಸಿವಿಎಸಕೆ (ಪ್ರಥಮ) ಕು.ಸ್ನೇಹಾಉದಯ ನಾಯ್ಕ ಸಿವಿಎಸ್‌ಕೆ (ದ್ವಿತೀಯ) ಕು.ಗೌತಮ ಪಾಂಡುರಂಗ ಪಟಗಾರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಗಡೆ.(ತೃತೀಯ) ಗೀತಾಕಂಠಪಾಠಸ್ಪರ್ಧೆಯ ಪದವಿಪೂರ್ವ ವಿಭಾಗದಲ್ಲಿ ಕು.ಸ್ಮೃತಿ ಶಾನಭಾಗ್.ಸರಸ್ವತಿ ಪಪೂಕಾಲೇಜು(ಪ್ರಥಮ) ಕು.ಶ್ರೇಯಾಎಸ್ ಶೆಟ್ಟಿ.ಸರಸ್ವತಿ ಪಪೂಕಾಲೇಜು (ದ್ವಿತೀಯ) ಪೌಢಶಾಲಾ ವಿಭಾಗದಲ್ಲಿ ಕು.ಶ್ರೀನಿವಾಸ ವಾಸುದೇವ ಶಾನಭಾಗ್.ಸಿವಿಎಸ್‌ಕೆ.ಕಲಭಾಗ್.(ಪ್ರಥಮ)ಕು.ನಂದಿತಾ ಸುರೇಶ ಭಟ್ಟ.ಗಿಬ್‌ಆಂಗ್ಲ ಮಾಧ್ಯಮ ಪೌಢಶಾಲೆ.(ದ್ವಿತೀಯ) ಕು.ಶಾಂತಿಕಾಗುರುನಾಥ ಭಟ್ಟ.ಸಿವಿಎಸ್‌ಕೆ.ಕಲಭಾಗ್.(ತೃತೀಯ)ಪ್ರಾಥಮಿಕ ವಿಭಾಗದಲ್ಲಿ ಕು.ಶ್ರೇಯಾಗಿರೀಶ ಹೆಬ್ಬಾರ.ಸರಸ್ವತಿ ವಿದ್ಯಾಕೇಂದ್ರ.(ಪ್ರಥಮ) ಕು.ಅನನ್ಯಾ ಶಿವರಾಂ ಭಟ್ಟ.ಸರಸ್ವತಿ ವಿದ್ಯಾಕೇಂದ್ರ.(ದ್ವಿತೀಯ) ಕು.ಸುಹಾಸಿನಿ ಜಿ ಪೈ.ಹೆಣ್ಣುಮಕ್ಕಳ ಶಾಲೆ ಹೆಗಡೆ.(ತೃತೀಯಾ)ಸ್ಥಾನ ಪಡೆದಿದ್ದಾರೆ.
ಬಹುಮಾನ ವಿತರಣಾ ಸಮಾರಂಭದಲ್ಲಿ ನಿವೃತ್ತಮುಖ್ಯ ಶಿಕ್ಷಕರು ಕುಮಟಾ ಭಗವದ್ಗೀತಾಅಭಿಯಾನ ಸಮಿತಿಯಅಧ್ಯಕ್ಷರೂ ಆದ ಶ್ರೀ ಎಮ್‌ಆರ್‌ಉಪಾಧ್ಯಾಯಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಭಗವದ್ಗೀತೆಯುಹಲವು ಸಾಧಕರಿಗೆ ಸ್ಫೂರ್ತಿಯಾದಗ್ರಂಥವಾಗಿದ್ದೂಇದರಯಾವ ಭಾಗವನ್ನುಓದಿದರೂ ನಮ್ಮಜೀವನಕ್ಕೆ ಪ್ರೇರಣೆಯನ್ನು ನೀಡುವಗ್ರಂಥವಾಗಿದೆ ಎoದರು.
ಕಾರ್ಯಕ್ರಮದ. ಅಧ್ಯಕ್ಷತೆಯನ್ನು ಉದ್ಯಮಿಗಳು,ಜಿಲ್ಲಾ ಭಗವದ್ಗೀತಾಅಭಿಯನ ಸಮಿತಿಯಅಧ್ಯಕ್ಷರಾದ ಶ್ರೀಮುರಳೀಧರ ಪ್ರಭುರವರು ವಹಿಸಿ ಮಾತನಾಡುತ್ತಾ ಈ ವರ್ಷಕುಮಟಾತಾಲೂಕಿನಾದ್ಯಂದ ಭಗವದ್ಗೀತಾಅಭಿಯಾನ ಅತ್ಯಂತ ಯಶಸ್ವಿಯಾಗಿ ನೆಡೆದಿದ್ದುಇದಕ್ಕೆಕಾರಣೀಕರ್ತರಾದ ಸರ್ವರೂ ಅಭಿನಂದನೆಗಳು ಎಂದು ಹೇಳುತ್ತಾ,ಗೀತೆಯ ಪಠಣಗೀತಾಅಭಿಯಾನದ ಸಂದರ್ಭದಲ್ಲಿ ಮಾತ್ರ ಸೀಮಿತವಾಗದೆ, ಪ್ರತಿನಿತ್ಯ ಭಗವದ್ಗೀತೆಯ ಕನಿಷ್ಠ ಐದು ಶ್ಲೋಕಗಳನ್ನಾದರೂ ಓದುವ ಪರಿಪಾಠ ರೂಢಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲರಿಗೂ ನೋಟ್ ಬುಕ್ ವಿತರಿಸಲಾಯಿತು. ಜಿಲ್ಲಾ ಭಗವದ್ಗೀತಾಅಭಿಯಾನದ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಆನಂದ ನಾಯ್ಕ,ಶ್ರೀಮತಿ ಸುಧಾ ಶಾನಭಾಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀಆರ್ ಎಮ್ ಶಾನಭಾಗ,ಶ್ರೀಟಿ ಜಿ ಭಟ್ಟ ಹಾಸಣಗಿ,ಶ್ರೀಅರುಣ ಮಣಕಿಕರ,ಶ್ರೀಮತಿಭವ್ಯಾ ಭಟ್ಟ ಶ್ರೀಮತಿ ಶ್ರೀದೇವಿ ಹೆಗಡೆ ಮುಂತಾದವರು ನಿರ್ಣಾಯಕರಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಶ್ರೀಗಣೇಶ ಭಟ್ಟ ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು.ಶ್ರೀಮತಿ ಜಯಾ ಶಾನಭಾಗ ವಂದಿಸಿದರು.