Important
Trending

ಆಸ್ಪತ್ರೆಯಿಂದ ತಪ್ಪಿಸಿಕೊಂಡ ಕರೊನಾ ಸೋಂಕು ದೃಢಪಟ್ಟ ಆರೋಪಿ

ಆರೋಪಿಯ ಪತ್ತೆಗೆ ಬಲೆ ಬೀಸಿದ ಪೊಲೀಸರು
ಗಂಧದ ಗಿಡ ಕಳ್ಳನತ ಪ್ರಕರಣದಡಿ ಬಂಧಿತನಾಗಿದ್ದ

[sliders_pack id=”1487″]

ಕಾರವಾರ: ಕರೊನಾ ಸೋಂಕು ದೃಢಪಟ್ಟ ಆರೋಪಿಯೊಬ್ಬ ಕ್ರಿಮ್ಸ್ ಐಸಿಯು ವಾರ್ಡ್ ನಿಂದ ತಪ್ಪಿಸಿಕೊಂಡ ಘಟನೆ ನಡೆದಿದೆ. ಸೈಯದ್ (25)  ಕ್ರಿಮ್ಸ್ ನಿಂದ ತಪ್ಪಿಸಿಕೊಂಡ ಆರೋಪಿ. ಮುಂಡಗೋಡದಲ್ಲಿ ಕಳೆದ ಎರಡು ದಿನಗಳ ಹಿಂದೆ ಗಂಧದ ಗಿಡ ಕಳ್ಳನತಕ್ಕೆ ಸಂಬoಧಿಸಿದoತೆ ಅರಣ್ಯ ಇಲಾಖೆಯ ಪ್ರಕರಣದಡಿ ಬಂಧಿತನಾಗಿದ್ದ.


ಈ ಸಂದರ್ಭದಲ್ಲಿ ಆರೋಪಿಗೆ ಕೋವಿಡ್ ತಪಾಸಣೆ ಮಾಡಲಾಗಿತ್ತು. ಕೊವಿಡ್ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕಾರವಾರದ ಕ್ರಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಕ್ರಿಮ್ಸ್ ಐಸಿಯುನಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಆರೋಪಿಯು ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ.

ತಪ್ಪಿಸಿಕೊಂಡ ಆರೋಪಿಯ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button