Uttara Kannada
Trending

ಹೊನ್ನಾವರದಲ್ಲೂ ಬೇರೂರಿದೆ ಬೆಟ್ಟಿಂಗ್ ಜಾಲ? 10 ಮಂದಿ ಬಂಧನ

ಹೊನ್ನಾವರ: ಬೆಟ್ಟಿಂಗ್ ಜಾಲ ಹೊನ್ನಾವರ ತಾಲೂಕಿನಲ್ಲೂ ಬೇರೂರಿದಂತೆ ಕಾಣುತ್ತಿದೆ. ಭಟ್ಕಳ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಹೊನ್ನಾವರದಲ್ಲಿ ಬಿಟ್ಟಿಂಗ್ ದಂಧೆಯನ್ನು ಬಯಲು ಮಾಡಿದ್ದಾರೆ. ಐಪಿಎಲ್ ಬೆಟ್ಟಿಂಗ್ ಸಂಬoಧ ಹೊನ್ನಾವರ ತಾಲೂಕಿನ ಹಳದೀಪುರದ 10 ಜನರನ್ನು ಬಂಧಿಸಿದ್ದಾರೆ.


ತಾಲೂಕಿನ ಹಳದೀಪುರದ ಸಂತೆ ಮಾರ್ಕೆಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಕಟ್ಟಿಕೊಂಡು ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ 10 ಜನರನ್ನು ಬಂಧಿಸಲಾಗಿದೆ. ಬಂಧಿತ ಆರೋಪಗಳಿಂದ 10 ಮೊಬೈಲ್ ಪೋನ್ , 21030 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಈ ಸಂಬAಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕಾಪಿಟಲ್ಸ್ ಪಂದ್ಯದ ವೇಳೆ ಬೆಟ್ಟಿಂಗ್ ಕಟ್ಟಿಕೊಂಡು, ಜೂಜಾಟ ನಡೆಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.


ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Related Articles

Back to top button