Focus News
Trending

ಮುರುಡೇಶ್ವರ ಪ್ರವಾಸಕ್ಕೆ ಬಂದ ವೇಳೆ ಈಜಲು ತೆರಳಿದ್ದಾಗ ಸಮುದ್ರಕ್ಕೆ ಬಿದ್ದಿದ್ದ ಇಬ್ಬರು; ಲೈಫ್ ಗಾರ್ಡ್ ಸಿಬ್ಬಂದಿಗಳಿಂದ ರಕ್ಷಣೆ

ಭಟ್ಕಳ : ಒಂದೇ ದಿನ ಪ್ರತ್ಯೇಕವಾಗಿ ಮುರುಡೇಶ್ವಕ್ಕೆ ಪ್ರವಾಸಕ್ಕೆ ಬಂದ 2 ತಂಡದ ಪ್ರವಾಸಿಗರು ಸಮುದ್ರಕ್ಕೆ ಈಜಲು ತೆರಳಿದ ಸಂದರ್ಭದಲ್ಲಿ ನೀರಿ ನಲ್ಲಿ ಮುಳುಗುತ್ತಿರುವ ವೇಳೆ ಸ್ಥಳೀಯ ಲೈಫ್ ಗಾರ್ಡ್ ಅವರನ್ನು ರಕ್ಷಿಸಿ ಪ್ರಾಣಾಪಾಯದಿಂದ ಕಾಪಾಡಿದ ಘಟನೆ ಭಾನುವಾರ ನಡೆದಿದೆ.

ಭಾನುವಾರ ಬೆಳಿಗ್ಗೆ ನಾಲ್ಕು ಮಂದಿ ಸ್ನೇಹಿತರು ತುಮಕೂರಿನಿಂದ ಜೋಗಪಾಲ್ಸ್ ನಿಂದ ಮುರುಡೇಶ್ವಕ್ಕೆ ಬಂದು ದೇವರ ದರ್ಶನ ಪಡೆದು ಸಮುದ್ರಕ್ಕೆ ಈಜಲು ತೆರಳಿದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿರುವ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆಯಾದ ಇಬ್ಬರಲ್ಲಿ ತುಮಕೂರು ಶಿರಾ ತಾಲೂಕಿನ ದೊಡ್ಡಗುನ್ನಿ ಗ್ರಾಮದ ಅರ್ಜುನ ಎಸ್.ಎ (38) ಇನ್ನೋರ್ವ ಚರಣ ಸಿ.ಎಸ್ ಎಂದು ತಿಳಿದು ಬಂದಿದೆ

ಹಾಗೂ ಭಾನುವಾರ ಮಧ್ಯಾಹ್ನ 9 ಮಂದಿ ಸ್ನೇಹಿತರು ಬೆಂಗಳೂರಿನಿಂದ ಮುರುಡೇಶ್ವಕ್ಕೆ ದೇವರ ದರ್ಶನ ಪಡೆದು ಸಮುದ್ರಕ್ಕೆ ಈಜಲು ತೆರಳಿದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿರುವ 3 ಮಂದಿಯನ್ನು ಸ್ಥಳೀಯ ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ.

ರಕ್ಷಣೆಯಾದ ಮೂವರು ಬೆಂಗಳೂರಿನ ವಿ.ಐ ಟಿ
ಎಂಜಿನಿಯರಿಂಗ ಕಾಲೇಜು ವಿದ್ಯಾರ್ಥಿಗಳಾದ ಸಾತ್ವಿಕ, ಆದರ್ಶ, ನವೀನ ಚಿಕ್ಕಬಳ್ಳಾಪುರ ಬೆಂಗಳೂರು ನಿವಾಸಿ ಎಂದು ತಿಳಿದು ಬಂದಿದೆ

ಈ ಎರಡು ಘಟನೆಯ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಜಯರಾಮ ಹರಿಕಾಂತ , ಅಣ್ಣಪ್ಪ ಹರಿಕಾಂತ, ಶಶಿಧರ ನಾಯ್ಕ ಹಾಗೂ ಮೀನುಗಾರರಾದ ಪುರ್ಸು ಹರಿಕಾಂತ ,ಸಂತೋಷ ಹರಿಕಾಂತ ಇದ್ದರು.

ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರತ್ಯೇಕ ಮಾಹಿತಿ ನೀಡಲಾಗಿದೆ.

ವಿಸ್ಮಯ ನ್ಯೂಸ್ , ಉದಯ್ ಎಸ್ ನಾಯ್ಕ ಭಟ್ಕಳ

ಇದನ್ನೂ ಓದಿ: ಪ್ರಮುಖ‌‌ ಸುದ್ದಿಗಳು

Back to top button