ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66 ರ ಎಪಿಎಂಸಿ ಪೆಟ್ರೋಲ್ ಪಂಪ್ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತ ಪಟ್ಟ ಧಾರುಣ ಘಟನೆ ಸಂಭವಿಸಿದೆ.
ಭಾವಿಕೇರಿ ಮೂಲದ , ಹಾಲಿ ಡೊಂಗ್ರಿಯಲ್ಲಿ ವಾಸವಾಗಿದ್ದ ಶೇಖರ ಗಣಪತಿ ನಾಯ್ಕ (ಮೃತ ದುದೈವಿಯಾಗಿದ್ದಾನೆ. ವೃತ್ತಿಯಿಂದ ಚಾಲಕನಾಗಿರುವ ಈತ ಟಿಪ್ಪರ್ ಮತ್ತಿತರ ವಾಹನಗಳನ್ನು ಚಲಾಯಿಸಿ ಜೀವನ ನಡೆಸಿಕೊಂಡಿದ್ದು,,ಡೊಂಗ್ರಿಯಿಂದ ಅಂಕೋಲಾಕ್ಕೆ ತನ್ನ ಬೈಕ್ ಮೇಲೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.
ಆತ ಹೆದ್ದಾರಿ ಮೇಲೆ ಸಾಗುತ್ತಿರಬೇಕಾದರೆ,ಹೆದ್ದಾರಿ ಅಂಚಿನಿಂದ ಕತ್ತಲ ಪ್ರದೇಶದಲ್ಲಿ ನಡೆದುಕೊಂಡು ಬರುತ್ತಿದ್ದ ವೃದ್ಧೆಯನ್ನು ಗಮನಿಸದೇ, ಅಚಾನಕ್ ಆಗಿ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಶೆಡಗೇರಿ – ಹುಲಿದೇವರವಾಡಾ ನಿವಾಸಿ ಸಣ್ಣಮ್ಮ ಸುಕ್ರು ಗೌಡ ಅವರ ಕಾಲಿಗೆ ಗಂಭೀರವಾದ ಪೆಟ್ಟು ಬಿದ್ದು, ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ,ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಕಳುಹಿಸಲಾಗಿದೆ.
ವಿಷಯ ತಿಳಿದ ಸಿಪಿಎ ಸಂತೋಷ್ ಶೆಟ್ಟಿ,ಪಿಎಸ್ಐ ಪ್ರೇಮನ ಗೌಡ ಪಾಟೀಲ ಆಗಮಿಸಿ ಸ್ಥಳ ಪರಿಶೀಲಿಸಿ,ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು,ಹಾಗೂ ಹೆದ್ದಾರಿ ಸುಗಮ ಸಂಚಾರಕ್ಕೆ ಸಿ ಸಿಬ್ಬಂದಿಗಳಿಗೆ ಮಾರ್ಗದರ್ಶನ ಮಾಡಿದರು.
ಹೆದ್ದಾರಿ ಅಂಚಿನ ನೀರು ಹೋಗುವ ಮೋರಿ ( ಸಿಡಿ ) ಯ ತಗ್ಗುಪ್ರದೇಶದಲ್ಲಿ ಬೈಕ್ ಸಮೇತ ಸಿಡಿದು ಬಿದ್ದ ರಭಸಕ್ಕೆ ,ಹೆಲ್ಮೆಟ್ ಚೂರು ಚೂರಾಗಿ ತಲೆ ಮತ್ತು ಮುಖದ ಭಾಗಕ್ಕೆ ತೀವ್ರ ಹೊಡೆತ ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.
ಘಟನಾ ಸ್ಥಳದಿಂದ ಶವವನ್ನು ಮೇಲೆತ್ತಿ ತಾಲೂಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ, ಸಹಾಯಕರಾದ ಬೊಮ್ಮಯ್ಯ ನಾಯ್ಕ, ಅನಿಲ ಭೋವಿ ,ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿಗಳು ಸಹಕರಿಸಿದರು.
ಬೈಕ್ ಸವಾರನ ಜೊತೆ ಹಿಂಬದಿ ಸವಾರನೂ ಇದ್ದಿರಬಹುದೇ ಎಂಬ ಹಿನ್ನೆಲೆಯಲ್ಲಿ ಪೊಲೀಸರು, ಅಗ್ನಿಶಾಮಕದಳದವರು,ಹಾಗೂ ಆಯ್ ಆರ್ ಬಿ ಸಿಬ್ಬಂದಿಗಳು , ಮತ್ತು ಸ್ಥಳೀಯರು ಹೆದ್ದಾರಿ ಅಂಚಿನ ತಗ್ಗುಪ್ರದೇಶದಲ್ಲಿ ಪೊದೆಗಳ ಮಧ್ಯೆ ಶೋಧ ಕಾರ್ಯ ನಡೆಸಿದ್ದರು. ಮೃತನ ಮುಖ ಚಹರೆ ಪತ್ತೆ ಹಚ್ಚುವಲ್ಲಿ ಗೋಪಾಲ ನಾಯ್ಕ, ಸುನೀ ಮತ್ತಿತರರು ಸಹಕರಿಸಿದರು.
ಶೇಖರ್ ನಾಯ್ಕ ಮೃತನಾದ ಸುದ್ದಿ ತಿಳಿದು ಡೊಂಗ್ರಿ ಭಾವಿಕೇರಿ , ಕುಂಬಾರಕೇರಿ, ಲಕ್ಷ್ಮೇಶ್ವರ ದ ಕೆಲ ಗ್ರಾಮಸ್ಥರು, ಮೃತನ ಕುಟುಂಬ ಸದಸ್ಯರು,ಸಮಾಜದವರು ಹಾಗೂ ಇತರರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ