ಎಮ್.ಇ.ಎಸ್. ಹಾಗೂ ಶಿವಸೇನೆಯ ಪುಂಡಾಟಿಕೆಗೆ ಖಂಡನೆ: ಕಾರವಾರದಲ್ಲಿ ಕರವೇ ಪ್ರತಿಭಟನೆ: ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಆಕ್ರೋಶ
ಕಾರವಾರ: ಬೆಳಗಾವಿಯಲ್ಲಿ ಎಮ್.ಇ.ಎಸ್. ಹಾಗೂ ಶಿವಸೇನೆ ನಡೆಸುತ್ತಿರುವ ಪುಂಡಾಟಿಕೆ ಖಂಡಿಸಿ ರವಿವಾರ ಕಾರವಾರದ ಸುಭಾಷ್ ವೃತ್ತದ ಬಳಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಅವರ ನೇತ್ರತ್ವದಲ್ಲಿ ಮಹಾರಾಷ್ಟç ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನೆಯನ್ನುದೇಶಿಸಿ ಮಾತವಾಡಿದ ಭಾಸ್ಕರ ಪಟಗಾರ ಅವರು, ಕರ್ನಾಟದಲ್ಲಿ ಕನ್ನಡಿಗನೇ ಸಾರ್ವಭೌಮ, ಬೆಳಗಾವಿಯ ಒಂದಿAಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಕರ್ನಾಟಕ ಸರ್ಕಾರದ ಮೃದುಧೋರಣೆ ಬೆಳಗಾವಿಯಲ್ಲಿ ಎಮ್.ಇ.ಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಪಂಡಾಟಿಕೆಗೆ ಕುಮ್ಮಕ್ಕು ನೀಡಿದಂತಾಗಿದೆ ಎಂದರು. ಸೋಮವಾರ ರಾಜ್ಯದ ಎಲ್ಲಾ ಜಿಲ್ಲೆಯ ಕಾರ್ಯಕರ್ತರು ಬೆಗಾವಿಯ ವಿಕಾಸ ಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಲಿದ್ದೇವೆ.
ಈ ಪ್ರತಿಭಟನೆಗೆ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಸಹಕಾರವನ್ನು ಕೋರಿದರು. ಇಂದೊಮ್ಮೆ ಜಿಲ್ಲೆಯ ಜನಪ್ರತಿನಿಧಿಗಳು ಸಹಕಾರ ನೀಡದೇ ಇದ್ದಲ್ಲಿ ಜನಪ್ರತಿನಿಧಿಗಳ ಕ್ಷೇತ್ರವ್ಯಾಪ್ತಿಯಲ್ಲಿ ಅವರ ಕಚೇರಿ ಹಾಗೂ ಮನೆಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕರ್ನಾಟಕಾ ರಕ್ಷಣಾ ವೇದಿಕೆಯ ಹೊನ್ನಾವರ ತಾಲೂಕಾಧ್ಯಕ್ಷರಾದ ಮಂಜುನಾಥ ಗೌಡ, ಕಾರವಾರ ಅಧ್ಯಕ್ಷರಾದ ನರೇಂದ್ರ ತಳೇಕರ್, ಮುಖಂಡರಾದ ನಾಗು ಹಳ್ಳೇರ್ ಸೇರಿದಂತೆ ಅನೇಕರು ಹಾಜರಿದ್ದರು.
ವಿಸ್ಮಯ ನ್ಯೂಸ್, ಕಾರವಾರ.