ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದು, ಕ್ರಿಸ್ ಮಸ್ ಶುಭಾಶಯ ಕೋರುತ್ತಾ ಮಾತು ಆರಂಭಿಸಿದರು. ಒಮಿಕ್ರಾನ್ ಸೋಂಕು ದೇಶವನ್ನು ಕಾಡುತ್ತಿದ್ದು,ಆದರೂ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸಮಾಧಾನದಿಂದ ಇರಿ. ಎಲ್ಲರು ಮಾಸ್ಕಧರಿಸಿ ಎಂದರು.
ಕಷ್ಟದ ಪರಿಸ್ಥಿತಿಯಲ್ಲೂ ವ್ಯಾಕ್ಸಿನ್ ಅಭಿಯಾನ ಯಶಸ್ವಿಯಾಗಿದೆ. ಮೃತಪಡುವವರ ಸಂಖ್ಯೆ ಇಳಿಕೆಯಾಗಿದೆ. ಜನವರಿ 3 ರಿಂದ 15 -18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ಆರಂಭಿಸಲಾಗುವುದು. ,ಶಾಲಾ ಕಾಲೇಜುಗಳಿಗೆ ತೆರಳಿ ವ್ಯಾಕ್ಸಿನ್‌ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಕೋವಿಡ್ ವಾರಿಯರ್ಸ್ ಗಳೀಗೆ ಪ್ರಿಕಾಷನ್ ಡೋಸ್ ನೀಡಲಾಗುವುದು ಎಂದು ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ಅನಾರೋಗ್ಯ ಇತರ ಸಮಸ್ಯೆ ಇದ್ದವರಿಗೂ ವೈದ್ಯರ ಸಲಹೆ ಮೇರೆಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದರು.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್