Follow Us On

WhatsApp Group
Big News
Trending

ಸೈನಿಕರ ತಾಯಂದಿರ ಪಾದಪೂಜೆ : ದೇಶಕ್ಕಾಗಿ ತಮ್ಮ ಮಕ್ಕಳನ್ನು ನೀಡಿರುವ ತಾಯಂದಿರಿಗೆ ಅಭಿನಂದನೆ

ಕುಮಟಾ: ಶಾರದಾಂಬೆಯ ಜಯಂತಿ ಹಾಗೂ ರಾಕ್‌ಡೇ ಹಿನ್ನೆಲೆಯಲ್ಲಿ ಯುವಾ ಬ್ರಿಗೇಡ್ ಕುಮಟಾ ಇವರ ವತಿಯಿಂದ ಅಮ್ಮ ನಮನ ಹಾಗೂ ವಿವೇಕ ಮಾಲಾಧಾರಣೆ ಕಾರ್ಯಕ್ರಮವನ್ನು ಕುಮಟಾ ಪಟ್ಟಣದ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಭಾರತ ದೇಶಕ್ಕೆ ವೀರ ಯೋದರನ್ನು ನೀಡಿರುವ ತಾಯಂದರಿಗೆ ಅಮ್ಮ ನಮನ ಕಾರ್ಯಕ್ರಮದಡಿಯಲ್ಲಿ ಪಾದ ಪೂಜೆಮಾಡುವ ವಿಶೇಷ ಯೋಚನೆಯೊಂದಿಗೆ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಾಜರಿದ್ದ ಕುಮಟಾ ತಾಲೂಕಿನ ಮಾಜಿ ಹಾಗೂ ಹಾಲಿ ಸೈನಿಕರ ತಾಯಂದಿರು ದೀಪಕ್ಕೆ ಎಣ್ಣೆಯನ್ನು ಎರೆಯುವ ಮೂಲಕ ನೆರವೇರಿಸಿ, ಭಾರತಾಂಬೆಯ ಹಾಗೂ ಸ್ವಾಮಿ ವಿವೇಕಾನಂದನವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನಂತರ ಯುವಾ ಬ್ರಿಗೇಡ್‌ನ ಪ್ರಮುಖರೆಲ್ಲರು ಒಗ್ಗೂಡಿ ಸೈನಿಕರ ತಾಯಂದಿರ ಪಾದಪೂಜೆಯನ್ನು ನೆರವೇರಿಸಿದರು. ನಂತರ ಸೈನಿಕರ ತಾಯಂದಿರಿoದಲೇ ವಿವೇಕ ಮಾಲಾಧಾರಣೆ ಕಾರ್ಯಕ್ರಮವೂ ಸಹ ನೆರವೇರಿತು. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್‌ನ ಮಂಗಳೂರು ವಿಭಾಗ ಸಂಚಾಲಕರಾದ ಅಣ್ಣಪ್ಪ ನಾಯ್ಕ ಅವರು ಮಾತನಾಡಿ, ರಾಕ್‌ಡೇ ವಿಶೇಷವಾಗಿ ಪ್ರತಿ ವರ್ಷವೂ ಯುವಾ ಬ್ರಿಗೇಡ್ ವತಿಯಿಂದ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಭಾರಿ ಭಾರತ ದೇಶಕ್ಕಾಗಿ ತಮ್ಮ ಮಕ್ಕಳನ್ನು ನೀಡಿರುವ ಕುಮಟಾ ತಾಲೂಕಿನ ಮಾಜಿ ಹಾಗೂ ಹಾಲಿ ಸೈನಿಕರ ತಾಯಂದಿರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಅಮ್ಮ ನಮನ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್‌ನ ಜಿಲ್ಲಾ ಸಂಚಾಲಕರಾದ ಸತೀಶ ಪಟಗಾರ, ತಾಲೂಕಾ ಸಂಚಾಲಕರಾದ ಪ್ರಕಾಶ ನಾಯ್ಕ, ಪರಮವೀರ ಇದರ ಜಿಲ್ಲಾ ಸಂಚಾಲಕರಾದ ಸಂದೀಪ ಮಡಿವಾಳ, ಪರಮುಖರಾದ ಕಿಶೋರ ಶೆಟ್ಟಿ, ರವೀಶ ನಾಯ್ಕ, ಗಿರೀಶ ಪಟಗಾರ, ಲಕ್ಷಿö್ಮಕಾಂತ ಮುಕ್ರಿ, ಅಮಿತ್ ಪಟಗಾರ ವಿಷ್ಣು ಪಟಗಾರ, ಶಬರಿ ನಾಯ್ಕ, ದೀಪ ಕೊಡಿಯಾ ಮುಂತಾದವರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button