Join Our

WhatsApp Group
Important
Trending

ಅಜ್ಜನ ತಿಥಿ ದಿನವೇ ಮೊಮ್ಮಗ ಸಾವಿಗೆ ಶರಣಾದನೇ? ರೈಲ್ವೆ ಹಳಿ ಪಕ್ಕ ಯುವಕನ ಮೃತದೇಹ ಪತ್ತೆ ?

ಅಂಕೋಲಾ: ಯುವಕ ನೋರ್ವ ಬಾಳೇಗುಳಿ (ಬೊಗ್ರಿಬೈಲ್ )  ಆಯ್ ಆರ್ ಬಿ ಕೃಷರ್ ಪ್ಲ್ಯಾಂಟ್ ಪಕ್ಕದ ರೈಲ್ವೆ ಹಳಿ ಬಳಿ, ದೇಹ ಚಿದ್ರ ಚಿದ್ರ ಗೊಂಡ  ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ  ಘಟನೆ ಕುರಿತು ಪೋಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ.  ಪಟ್ಟಣ ವ್ಯಾಪ್ತಿಯ ಲಕ್ಷೇಶ್ವರ – ಕೆರೆಕಟ್ಟಾದ ಆಟೋ ಚಾಲಕ ಆದಿತ್ಯ ಕುಮಾರ ನಾಯ್ಕ (21) ಮೃತ ದುರ್ದೈವಿಯಾಗಿದ್ದಾನೆ. 

ಮನೆಯಲ್ಲಿ  ಮತ್ತು  ಊರಿನ ಎಲ್ಲರೊಂದಿಗೂ ಈತ ಅನೋನ್ಯವಾಗಿ ಇದ್ದ ಎನ್ನಲಾಗಿದೆ.  ಪಟ್ಟಣ ಹಾಗೂ ಗ್ರಾಮಾಂತರ ಭಾಗದ  ಜನರನೇಕರು ದಹಿಂಕಾಲ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮದಲ್ಲಿದ್ದರೆ, ಈ ಯುವಕ ಮಾತ್ರ ರಾಷ್ಟ್ರೀಯ ಹೆದ್ದಾರಿ 66 ನ್ನು  ದಾಟಿ ಬಾಳೇಗುಳಿಯ ಬಹುದೂರದ ರೈಲ್ವೆ ಹಳಿ ಬಳಿ ಯಾಕೆ ಹೋಗಿರಬಹುದು? ಎನ್ನುವ ಮಾತುಗಳು ಕೇಳಿ ಬಂದಿದೆ.   

ಯುವಕನ ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ  ತಾಲೂಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ,ಸಾಮಾಜಿಕ ಕಾರ್ಯಕರ್ತರಾದ ಕನಸಿಗದ್ದೆಯ ಬೊಮ್ಮಯ್ಯ ನಾಯ್ಕ,ಅನಿಲ್ ಭೋವಿ,ಕೆರೆಕಟ್ಟೆ ಗ್ರಾಮಸ್ಥರು, ಸ್ಥಳೀಯರು ಹಾಗೂ ರಿಕ್ಷಾ ಸ್ಟ್ಯಾಂಡ್  ಪ್ರಮುಖರು ಸಹಕರಿಸಿದರು.

ಆದಿತ್ಯನ ಸಾವಿನ ಸುದ್ದಿ ತಿಳಿದು ಆತನ ಕುಟುಂಬಸ್ಥರು,ಗೆಳೆಯರು ಹಾಗೂ ಊರ ನಾಗರಿಕರು ತಾಲೂಕಾಸ್ಪತ್ರೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ,ಕಂಬನಿ ಮಿಡಿಯುತ್ತಿರುವ ದೃಶ್ಯ ಕಂಡುಬಂತು.

ಆದಿತ್ಯ ಮೃತನಾದ ಅರಿವಿಲ್ಲದೆ, ಆತನ ಕುಟುಂಬದವರು  ತಮ್ಮ ಮನೆಯ ಪೂರ್ವಜರೋರ್ವರ ತಿಥಿ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದ್ದು, ಅದೇ ಮನೆಯ ಕಿರಿಯ ಕುಡಿಯೂ ಇನ್ನಿಲ್ಲ ವಾಗಿರುವುದು ಕೆರೆಕಟ್ಟೆ ಕುಟುಂಬದಲ್ಲಿ ದುಃಖದ ಕಟ್ಟೆ ಒಡೆಯುವಂತಾಗಿದೆ.               

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button