Follow Us On

WhatsApp Group
Big News
Trending

ಸೋದರತ್ತೆಯ ಸ್ನಾನದ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್: ಸೋದರಳಿಯನ ಬಂಧನ


ಹೊನ್ನಾವರ: ಮಹಿಳೆಯೊಬ್ಬಳ ಸ್ನಾನದ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆಂದು ಆರೋಪಿಸಿ ವ್ಯಕ್ತಿಯೋರ್ವನ ವಿರುದ್ಧ ಆತನ ಸೋದರ ಅತ್ತೆ ದೂರು ದಾಖಲಿಸಿದ ಘಟನೆ ನಡೆದಿದೆ. ದೂರಿನ ಹಿನ್ನಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪಟ್ಟಣದ ತುಳಸಿನಗರದ ವ್ಯಕ್ತಿಯೊಬ್ಬ ಕಳೆದ ಐದು ತಿಂಗಳಿoದ ಮಹಿಳೆಯ ಮೊಬೈಲ್ ನಂಬರಿಗೆ ಕರೆ ಮಾಡಿ, ಸ್ನಾನ ಮಾಡುವ ಒಂದು ವಿಡಿಯೋ ತನ್ನ ಬಳಿ ಇದೆ. ತನಗೆ ಹಣ ಕೊಡಬೇಕು ಮತ್ತು ಸ್ನಾನ ಮಾಡುವ ಇನ್ನೂ ಎರಡು ವಿಡಿಯೋವನ್ನು ಮಾಡಿ ತನಗೆ ಕಳುಹಿಸಬೇಕು. ಇಲ್ಲದಿದ್ದಲ್ಲಿ ಎಲ್ಲರಿಗೂ ವಿಡಿಯೋವನ್ನು ಕಳುಹಿಸಿ ಮಾನ ಕಳೆಯುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.

ತಾನು ಹೇಳಿದಂತೆ ಕೇಳು, ಇಲ್ಲವಾದರೆ ತನ್ನ ಹತ್ತಿರ ಇರುವ ಸ್ನಾನದ ವಿಡಿಯೋವನ್ನು ಎಲ್ಲರಿಗೂ ಕಳುಹಿಸಿ ನಿನ್ನ ಮಾನ ತೆಗೆಯುತ್ತೇನೆ. ಈ ವಿಷಯವನ್ನು ಬೇರೆ ಯಾರಿಗಾದರೂ ಹೇಳಿದರೆ, ಬದುಕಲು ಬಿಡುವದಿಲ್ಲ ಎಂದು ಜೀವ ಬೆದರಿಕೆ ಕೂಡ ಒಡ್ಡಿದ್ದ ಎಂದು ಸೋದರ ಅತ್ತೆ ದೂರಿನಲ್ಲಿ ತಿಳಿಸಿದ್ದಳು. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು,ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜಿಲ್ಲಾ ಕಾರಾಗ್ರಹಕ್ಕೆ ಕರೆದೊಯ್ದಿದ್ದಾರೆ.


ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Back to top button