ಗೋಕರ್ಣ: ಹೊಸ ವರ್ಷ ಸಂಭ್ರಮಕ್ಕಾಗಿ ಜಿಲ್ಲೆಗೆ ಮೋಜು ಮಸ್ತಿಗೆ ಬಂದವರು ಸಮುದ್ರಕ್ಕೆ ಇಳಿಯುವುದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಘಟನೆ ಹೆಚ್ಚುತ್ತಿದೆ. ಇಲ್ಲಿನ ಕುಡ್ಲೆ ಬೀಚಿನಲ್ಲಿ ಪ್ರವಾಸಕ್ಕೆ ಬಂದ ಮೂವರು ಸಮುದ್ರ ಪಾಲಾಗುತ್ತಿದ್ದು, ಅವರನ್ನು ಲೈಪ್ ಗಾರ್ಡ್ ಹಾಗು ಪ್ರವಾಸಿ ಮಿತ್ರ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಮುಳುಗುತ್ತಿದ್ದ ಮೂವರು ರಾಘವೇಂದ್ರ (24), ಅರುಣಕೃಷ್ಣ (25), ಗ್ರೀಸ್ಮಾ(23) ಇವರನ್ನು ಸಮುದ್ರದಿಂದ ಎಳೆತಂದು ರಕ್ಷಣೆ ಮಾಡಲಾಗಿದೆ. ಈ ಮೂವರು ಬೆಂಗಳೂರಿನಿಂದ ಗೋಕರ್ಣ ಪ್ರವಾಸಕ್ಕೆ ಬಂದಿದ್ದು, ನೀರಿನಲ್ಲಿ ಈಜಲು ತೆರಳಿದ ವೇಳೆ ದುರ್ಘಟನೆ ನಡೆದಿದೆ.
ವಿಸ್ಮಯ ನ್ಯೂಸ್ ಗೋಕರ್ಣ
ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091