ಮತ್ತಷ್ಟು ಏರಿಕೆ ಕಂಡ ಕೋವಿಡ್ ಕೇಸ್: ಜಿಲ್ಲೆಯ ಜನರಲ್ಲಿ ಆತಂಕ

ಕಾರವಾರ: ಉತ್ತರ ಕನ್ನಡದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದಿಢೀರ್ ಏರಿಕೆಕಾಣುತ್ತಿದೆ. ನಿನ್ನೆ 37 ಕೇಸ್ ದಾಖಲಾಗಿದ್ದರೆ ಇಂದು 51 ಮಂದಿಗೆ ಪಾಸಿಟಿವ್ ಬಂದಿದೆ.

ಕಾರವಾರದಲ್ಲಿ 30, ಭಟ್ಕಳದಲ್ಲಿ 5, ಶಿರಸಿಯಲ್ಲಿ 2,ಅಂಕೋಲಾದಲ್ಲಿ 4, ಕುಮಟಾದಲ್ಲಿ 2, ಹೊನ್ನಾವರ 1,ಮುಂಡಗೋಡ 1, ಹಳಿಯಾಳದಲ್ಲಿ 6 ಸೇರಿ ಒಟ್ಟು 51 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 130ಕ್ಕೆ ಏರಿಕೆಯಾಗಿದ್ದು, 24 ಮಂದಿ ಆಸ್ಪತ್ರೆಯಲ್ಲಿದ್ದರೆ, 106 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version