Big News
Trending

ನಾಗರ ಹಾವೇ ಕಚ್ಚಿರಬಹುದೆಂಬ ಭಯದಲ್ಲಿ ಆಸ್ಪತ್ರೆಗೆ ದಾಖಲಾದ ಯುವಕ: ಕಚ್ಚಿದ ಹಾವನ್ನೇ ಹಿಡಿದು ಆಸ್ಪತ್ರೆಗೆ ತಂದು ಆತಂಕ ದೂರ ಮಾಡಿದ ಉರಗ ಪ್ರೇಮಿ ಕುಟುಂಬದ ಅಪ್ಪ- ಮಗಳು.

ಅಂಕೋಲಾ: ತಾಲೂಕಿನ ಬೆಲೇಕೇರಿಯಲ್ಲಿ ಬಲೆಯೊಂದರಲ್ಲಿ ಸಿಲುಕಿದ್ದ ಹಾವನ್ನು ತಪ್ಪಿಸುವ ಪ್ರಯತ್ನದಲ್ಲಿದ್ದ ಯುವಕನಿಗೆ ಹಾವು ಕಚ್ಚಿದ್ದರಿಂದ ಗ್ರಾಮಸ್ಥರು ಆತಂಕಗೊಂಡು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದು ಉರಗ ಪ್ರೇಮಿ ಅವರ್ಸಾದ ಮಹೇಶ ನಾಯ್ಕ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಿಸಿ ಅದೊಂದು ಕೇರೆ ಹಾವೆಂದು ಸ್ಪಷ್ಟಪಡಿಸಿದ ಮೇಲೆ ಜನರ ಆತಂಕ ದೂರವಾಗಿದೆ.

ಬಲೆಯಲ್ಲಿ ಸಿಲುಕಿದ್ದ ದೊಡ್ಡ ಗಾತ್ರದ ಹಾವನ್ನು ತಪ್ಪಿಸಲು ಹೋದ ಬೆಲೇಕೇರಿಯ ಯುವಕ ಮಾರುತಿ ಬಾನಾವಳಿಕರ ಎಂಬಾತನಿಗೆ ಹಾವು ಕಚ್ಚಿದ್ದು ಜನರು ಅದು ನಾಗರ ಹಾವು ಇರಬಹುದು ಎಂದು ಭಯಗೊಂಡಿದ್ದರು ಕಡಿತಕ್ಕೊಳಗಾದ ಯುವಕನಿಗೆ ಕೂಡಲೇ ಅಂಕೋಲಾದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ಉರಗ ಪ್ರೇಮಿ ಮಹೇಶ ನಾಯ್ಕ ಅವರಿಗೆ ಕರೆ ಮಾಡಿದಾಗ ಅವರು ಕೂಡಲೇ ಸ್ಥಳಕ್ಕೆ ಬಂದು ಹಾವನ್ನು ಸಂರಕ್ಷಿಸಿ ಅದು ವಿಷಕಾರಿಯಲ್ಲದ ಕೇರೆ ಹಾವು ಎಂದು ಸ್ಪಷ್ಚಪಡಿಸಿದರು. ಮತ್ತು ಸರ್ಕಾರಿ ಆಸ್ಪತ್ರೆಗೆ ಹಾವನ್ನು ತಂದು ವೈದ್ಯರಿಗೆ ತೋರಿಸಿ ಕಡಿತಕ್ಕೊಳಗಾದ ಯುವಕನಿಗೆ ಧೈರ್ಯ ಹೇಳಿದರು.

ಮಹೇಶ ನಾಯ್ಕ ಅವರ ಮಗಳು ಭೂಮಿಕಾ ನಾಯ್ಕ ಕೇರೆ ಹಾವನ್ನು ಹಿಡಿದು ಅದನ್ನು ಸುರಕ್ಷಿತ ಪ್ರದೇಶದಲ್ಲಿ ಬಿಡಲು ತಂದೆಗೆ ಸಾಥ್ ನೀಡಿ ಗಮನ ಸೆಳೆದಳು.ಅಂಬುಲೆನ್ಸ್ ಚಾಲಕ ಉಮೇಶ್ ನಾಯ್ಕ ,ಮೀನುಗಾರ ಯುವ ಮುಖಂಡ ಸಚಿನ್ ಬಾನಾವಳಿಕರ ಇತರರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button