ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಮಂಗಳ ಲಕ್ಷ್ಮೀ ಅಧಿಕಾರ ಸ್ವೀಕಾರ: ಆಡಳಿತಾತ್ಮಕ ಅನುಭವ ಇರುವ ಮಹಿಳಾ ಅಧಿಕಾರಿ

ಅಂಕೋಲಾ: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಾನಕ್ಕೆ ಮಂಗಳಲಕ್ಷ್ಮೀ ಎಂ ಪಾಟೀಲ್ ಅವರನ್ನು ವರ್ಗಾಯಿಸಲಾಗಿದ್ದು, ಅವರು ಬುಧವಾರ ಕರ್ತವ್ಯಕ್ಕೆ ಹಾಜರಾದರು.

ಈ ಮೊದಲು ಅಂಕೋಲಾ ಬಿ ಇ ಓ ಆಗಿದ್ದ ಶ್ಯಾಮಲಾ ನಾಯಕ ಅವರ ಸ್ಥಾನದಲ್ಲಿ ಕ್ಷೇತ್ರಸಮನ್ವಯಾಧಿಕಾರಿಯಾಗಿದ್ದ ಹರ್ಷಿತಾ ಗಾಂವಕರ ಅವರು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈಗ ಆ ಹುದ್ದೆಗೆ ( ಕ್ಷೇತ್ರ ಶಿಕ್ಷಣಾಧಿಕಾರಿ )ಕಾರವಾರದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಂಗಳಲಕ್ಷ್ಮೀ ಪಾಟೀಲ ಅಧಿಕಾರ ಸ್ವೀಕರಿಸಿದ್ದಾರೆ. ಹರ್ಷಿತಾ ಗಾಂವಕರ ಅವರು ನೂತನ ಶಿಕ್ಷಣಾಧಿಕಾರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.

ಅಂಕೋಲಾ ತಾಲೂಕಿನ ಅಗ್ರಗೋಣದವರಾದ ಮಂಗಳ ಲಕ್ಷ್ಮಿ ಇವರು ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣ ಪೂರೈಸಿ, ಎಂ.ಎ ಎಂ.ಇಡಿ ಸ್ನಾತಕೋತ್ತರ ಪದವಿ ಪೂರೈಸಿ, 1995 ರಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕಿಯಾಗಿ ಸೇವೆ ಆರಂಭಿಸಿದರು.

1999 ರಲ್ಲಿ ಕೆ.ಇ.ಎಸ್ ಅಧಿಕಾರಿಯಾಗಿ ಆಯ್ಕೆ ಆದ ಮಂಗಳಲಕ್ಷ್ಮೀ ಅವರು ಕೇಣಿ ಮತ್ತು ಬೆಲೇಕೇರಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, 2013 ರಲ್ಲಿ ಕ್ಲಾಸ್ 1 ಅಧಿಕಾರಿಯಾಗಿ ಭಡ್ತಿ ಪಡೆದು ಕುಮಟಾದ ಡಯಟ್ ನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದರು.

2018ರಲ್ಲಿ ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡು ಸೇವೆ ಸಲ್ಲಿಸಿ, ನಂತರ ಉತ್ತರ ಕನ್ನಡ ಜಿಲ್ಲೆಯ ವಯಸ್ಕ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಮಂಗಳ ಲಕ್ಷ್ಮೀ ಇವರ ಪತಿ ಪ್ರೊ. ಮಂಜು ಪಾಟೀಲ, ಜಿ.ಸಿ. ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸುತ್ತಾ ,ಅಸಂಖ್ಯ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಪ್ರಾಧ್ಯಾಪಕರಾಗಿ ಗುರುತಿಸಿ ಕೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version