ಅಂಕೋಲಾದ ಬಾಸ ಗೋಡದಲ್ಲಿ ಡಿ 22 ರಿಂದ ಯಕ್ಷ ಸಪ್ತಾಹ : ಡಿ 28 ರಿಂದ 45ನೇ ವರ್ಷದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ

ಅಂಕೋಲಾ: ಶತಮಾನಗಳ ಇತಿಹಾಸ ಹೊಂದಿರುವ ಸುಭೋಧ ಯಕ್ಷಗಾನ ಮಂಡಳಿ ಬಾಸಗೋಡ ಇವರ ಆಶ್ರಯದಲ್ಲಿ 3 ನೇ ವರ್ಷದ ಸುಭೋಧ ಯಕ್ಷಗಾನ ಸಪ್ತಾಹ ಕೊಗ್ರೆಯ ಶ್ರೀಬೊಮ್ಮಯ್ಯ ದೇವರು ಮತ್ತು ಪರಿವಾರ ದೇವರುಗಳಿಗೆ ಬೆಳಕಿನ ಸೇವೆಯಾಗಿ ಹರಕೆ ಆಟ ರೂಪದಲ್ಲಿ ಡಿಸೆಂಬರ್ 22 ರಿಂದ 28 ರ ವರೆಗೆ ನಡುಬೇಣ ಮೈದಾನದಲ್ಲಿ ಪ್ರತಿದಿನ ಸಂಜೆ 6 ಗಂಟೆಯಿಂದ ನಡೆಯಲಿದೆ.
ಡಿಸೆಂಬರ್ 22 (ಸುದರ್ಶನ ಗರ್ವಭಂಗ), ಡಿ 23 ( ಸತ್ಯವಾನ ಸಾವಿತ್ರಿ ), ಡಿ 24 ( ರಾವಣ ವಧೆ), ಡಿ 25 (ಭಸ್ಮಾಸುರ ಮೋಹಿನಿ), ಡಿ 26 ( ಶ್ರೀಕೃಷ್ಣ ಪರಂಧಾಮ), ಡಿ 27 (ವೀರ ಬರ್ಬರಿಕ ) ಡಿಸೆಂಬರ್ 28 ರಂದು ಕೊಗ್ರೆ ಕ್ಷೇತ್ರ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನಗಳು ಪ್ರದರ್ಶನಗೊಳ್ಳಲಿವೆ.

ಯಕ್ಷರಂಗದ ಖ್ಯಾತ ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರು, ಸ್ಧಳೀಯ ಹವ್ಯಾಸಿ ಮತ್ತು ಯುವ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಜನತಾ ಕ್ರಿಕೆಟ್ ಕ್ಲಬ್ ಬಾಸಗೋಡ ಇವರ ಆಶ್ರಯದಲ್ಲಿ ಶೀಳ್ಯ ಅನಂತ ನಾಯಕ ಸ್ಮಾರಕ 45 ನೇ ವರ್ಷದ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಡಿಸೆಂಬರ್ 28 ರಿಂದ ಡಿಸೆಂಬರ್ 30 ರ ವರೆಗೆ ಬಾಸಗೋಡದ ನಡುಬೇಣ ಮೈದಾನದಲ್ಲಿ ನಡೆಯಲಿದ್ದು ವಿಜೇತ ತಂಡಕ್ಕೆ 45 ಸಾವಿರ ಬಹುಮಾನ ಮತ್ತು ಪಾರಿತೋಷಕ ರನ್ನರ್ ಅಪ್ ತಂಡಕ್ಕೆ 25 ಸಾವಿರ ಬಹುಮಾನ ಮತ್ತು ಪಾರಿತೋಷಕ ನೀಡಲಾಗುವುದಲ್ಲದೇ .ವಿವಿಧ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದ್ದು ,ಸಾರ್ವಜನಿಕರು ,ಕಲಾ ಪ್ರೇಮಿಗಳು ಮತ್ತು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಕ್ಷಗಾನ ಸಪ್ತಾಹ ಮತ್ತು ಕ್ರಿಕೆಟ್ ಪಂದ್ಯಾವಳಿ ಈ ಎರಡು ಕಾರ್ಯಕ್ರಮಗಳ ಯಶಸ್ಸಿಗೆ ಸರ್ವರೂ ಸಹಕರಿಸುವಂತೆ ವಿನಂತಿಸಿ , ಸುಭೋದ ಯಕ್ಷಗಾನ ಮಂಡಳಿ ಮತ್ತು ಜನತಾ ಕ್ರಿಕೆಟ್ ಕ್ಲಬ್ ಮತ್ತು ಬಾಸಗೋಡ ಊರ ನಾಗರಿಕರು ಎಲ್ಲರಿಗೂ ಸ್ವಾಗತ ಕೋರಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version