Important
Trending

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಬಿಜೆಪಿ ಯುವಮೋರ್ಚಾ

ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ

ಅಂಕೋಲಾ : ಕೋವೀಡ್-19 ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಜೂನ್ 25ರಿಂದ ಆರಂಭವಾಗಿದ್ದು ಜುಲೈ 03ರಂದು ಮುಕ್ತಾಯಗೊಳ್ಳಲಿದೆ. ಸರ್ಕಾರದ ನಿರ್ದೇಶನ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಸುತ್ತೋಲೆಯಂತೆ ಪರೀಕ್ಷಾ ಕೇಂದ್ರ ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ ಹಲವು ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ.
ಶಿಕ್ಷಣ ಇಲಾಖೆ ಮತ್ತು ಸಂಬಂಧಿಸಿದ ಎಲ್ಲಾ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ಜವಾಬ್ದಾರಿಗಳ ನಡುವೆ, ಪರೀಕ್ಷಾ ಕೇಂದ್ರದ ಹೊರಗಡೆ ಅನತಿ ದೂರದಲ್ಲಿ ನಿಂತು ಸ್ವಯಂಸೇವಕರಾಗಿ ಗುರುತಿಸಿಕೊಂಡ ಬಿಜೆಪಿ ಯುವಮೋರ್ಚಾದವರು, ಹಲವು ಪರೀಕ್ಷಾರ್ಥಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಹೇಳಿ ಪರೀಕ್ಷೆಯನ್ನು ನಿರ್ಭೀತಿಯಿಂದ ಎದುರಿಸುವಂತೆ ಧೈರ್ಯ ತುಂಬುವ ಪ್ರಯತ್ನ ನಡೆಸಿ ಗಮನ ಸೆಳೆದರು.
ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ ಗಣಪತಿ ನಾಯಕ ನೇತೃತ್ವದಲ್ಲಿ, ತಾಲೂಕಾ ಯುವಮೋರ್ಚಾ ಅಧ್ಯಕ್ಷ ಸಂತೋಷ ಭಾಸ್ಕರ ನಾರ್ವೇಕರ, ತಾಲೂಕಾ ಪ್ರಧಾನ ಕಾರ್ಯದರ್ಶಿ ನಿಲೇಶ ದಿನಕರ ನಾಯ್ಕ, ಪ್ರಮುಖರಾದ ನಾಗರಾಜ ನಾಯ್ಕ, ಪ್ರವೀಣ ನಾಯ್ಕ, ಭಾಸ್ಕರ ನಾಯ್ಕ, ಅನಿಲ್ ಮಹಾಲೆ, ಶಾಶ್ವತ ನಾಯ್ಕ, ಶುಭಂ ಒಳ್ವೇಕರ, ಬಾಬು ಗೌಡ, ಗುರು ನಾಯ್ಕ, ನಿತಿನ ನಾಯ್ಕ, ಸಂಭ್ರಮ ನಾಯ್ಕ, ಸಾಗರ ನಾಯ್ಕ, ಶರತ್ ನಾಯ್ಕ, ನವೀನ್, ವಿನಾಯಕ, ಲಕ್ಷ್ಮೀಕಾಂತ, ರಾಮಚಂದ್ರ ಹೆಗಡೆ ಸ್ವಯಂ ಸೇವಕರಾಗಿ ಪಾಲ್ಗೊಂಡಿದ್ದರು.

ಜಿಲ್ಲಾ ಬಿಜೆಪಿ ಯುವಮೋರ್ಚಾವತಿಯಿಂದ 14ಮಂಡಳಗಳ ವ್ಯಾಪ್ತಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ, ನಮ್ಮ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನೇಕರು ಎಸ್,ಎಸ್,ಎಲ್,ಸಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪರೀಕ್ಷೆ ಭಯ ಹೋಗಲಾಡಿಸಿ ಧೈರ್ಯ ತುಂಬುವ ಜಾಗೃತಿಗೆ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ.
-ಪ್ರಶಾಂತ ಜಿ. ನಾಯಕ ಅಂಕೋಲಾ.ಅಧ್ಯಕ್ಷರು ಜಿಲ್ಲಾ ಬಿಜೆಪಿ ಯುವಮೋರ್ಚಾ ಉ.ಕ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button