ಹೊನ್ನಾವರ: ಹೊನ್ನಾವರ ತಾಲೂಕಿನಲ್ಲಿ ದಿನೇ ದಿನೇ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಇಂದು ಒಂದೇ ದಿನ ತಾಲೂಕಿನ ನಾಲ್ವರಲ್ಲಿ ಕೊರೊನಾ ಪತ್ತೆಯಾಗಿದೆ. ಈನಾಲ್ವರು ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದು ಖಾಸಗಿ ಹೊಟೇಲ್‍ನಲ್ಲಿ ಕ್ವಾರಂಟೈನ್‍ನಲ್ಲಿದ್ದವರಾಗಿದ್ದಾರೆ.
ಖರ್ವಾ ಮೂಲದ 42 ವರ್ಷದ ವ್ಯಕ್ತಿ, ಸಂಶಿಯ ಕುದ್ರಿಗಿ ಮೂಲದ 67 ವರ್ಷದ ಮಹಿಳೆ ಹಾಗೂ ಆಕೆಯ ಪತಿ 78 ವರ್ಷದ ವ್ಯಕ್ತಿ ಮತ್ತು ತುಳಸಿನಗರದ 33 ವರ್ಷದ ಮಹಿಳೆಯಲ್ಲಿ ಸೋಂಕಿರುವುದು ಪತ್ತೆಯಾಗಿದೆ. ಎಲ್ಲರೂ ಜೂನ್ 16 ರಂದು ಮಹರಾಷ್ಟ್ರದಿಂದ ಆಗಮಿಸಿದವರಾಗಿದ್ದು ಖಾಸಗಿ ಹೊಟೇಲ್‍ನಲ್ಲಿ ಕ್ವಾರಂಟೈನ್ ಆಗಿದ್ದರು.
ಇದರಿಂದಾಗಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ.
Idagunji Mahaganapati
ಇಷ್ಟಾರ್ಥ ಸಿದ್ಧಿಸುವ ಇಡಗುಂಜಿ ಮಹಾಗಣಪತಿ ದರ್ಶನ
By Vishnu Hegde