Follow Us On

WhatsApp Group
Important
Trending

ಹೊನ್ನಾವರ ತಾಲೂಕಿನಲ್ಲಿ ಇಂದು 20 ಜನರಿಗೆ ಕೋವಿಡ್ ಪಾಸಿಟಿವ್: ಎಲ್ಲೆಲ್ಲಿ ಕೇಸ್ ದಾಖಲಾಗಿದೆ ನೋಡಿ?

ಹೊನ್ನಾವರ: ತಾಲೂಕಿನಲ್ಲಿ ಇಂದು ಒಟ್ಟು 20 ಕೋವಿಡ್ ಕೇಸ್ ದೃಢಪಟ್ಟಿದ್ದು, ಪಟ್ಟಣದ 18 ವರ್ಷದ ಯುವಕ, ಬಂದರ ರಸ್ತೆಯ 65 ವರ್ಷದ ಪುರು, ಮಠದಕೇರಿಯ 79 ವರ್ಷದ ಪುರುಷ, ಗಾಂಧಿನಗರದ 1 ವರ್ಷದ ಬಾಲಕಿಗೆ ಸೋಂಕು ಕಾಣಿಸಿಕೊಂಡಿದೆ.

ಗ್ರಾಮೀಣ ಭಾಗವಾದ ಮುಗ್ವಾದ 80 ವರ್ಷದ ಪುರುಷ, ಕಾಸರಕೋಡಿನ 39 ವರ್ಷದ ಪುರುಷ, 19 ವರ್ಷದ ಯುವತಿ, ಮಾವಿನಕುರ್ವಾದ 39 ವರ್ಷದ ಪುರುಷ 38 ವರ್ಷದ ಮಹಿಳೆ, ಹಡಿನಬಾಳದ 18 ವರ್ಷದ ಯುವಕ, ಹಾಡಗೇರಿಯ 45 ವರ್ಷದ ಪುರುಷ, ಹೇರಿಬೈಲನ 22 ವರ್ಷದ ಯುವಕ, ಚಂದಾವರದ 26 ವರ್ಷದ ಯುವಕ, ಮೋಳ್ಕೋಡನ 94 ವರ್ಷದ ಪುರುಷ, ಹಳದಿಪುರದ 65 ವರ್ಷದ ಪುರುಷ, 55 ವರ್ಷದ ಮಹಿಳೆ. , 24 ವರ್ಷದ ಯುವಕನಿಗೆ ಪಾಸಿಟಿವ್ ಬಂದಿದೆ.

ಕರ್ಕಿನಾಕಾದ 35 ವರ್ಷದ ಪುರುಷ, ಪಾವಿನಕುರ್ವಾದ 65 ವರ್ಷದ ಪುರುಷ. ,ಸರಳಗಿಯ 23 ವರ್ಷದ ಯುವಕ, ಸೇರಿದಂತೆ ಇಂದು ಹೊನ್ನಾವರ ತಾಲೂಕಿನಲ್ಲಿ ಒಟ್ಟು 20 ಜನರಲ್ಲಿ ಪಾಸಿಟಿವ್ ಪತ್ತೆಯಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button