Follow Us On

WhatsApp Group
Important
Trending

ಪಾದಚಾರಿ ಮೇಲೆ ಹಲ್ಲೆ ಮಾಡಿದ ಖಾಸಗಿ ಶಾಲಾ ವಾಹನದ ಚಾಲಕ: ಏನಾಯ್ತು ನೋಡಿ?

ಭಟ್ಕಳ: ತಾಲೂಕಿನ ಮುಖ್ಯವೃತ್ತದಲ್ಲಿ ಪಾದಾಚಾರಿಯೊಬ್ಬರ ಮೇಲೆ ಖಾಸಗಿ ಶಾಲಾ ವಾಹನದ ಚಾಲಕನೊರ್ವ ಕ್ಷುಲ್ಲಕ ಕಾರಣಕ್ಕಾಗಿ ನಡು ರಸ್ತೆಯಲ್ಲಿಯೇ ಹಲ್ಲೆ ನಡೆಸಿದ ವರದಿಯಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಿಜೆಪಿ ಹಿಂದುಳಿದ ವರ್ಗದ ಯುವಾ ಮೋರ್ಚದ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಎನ್ ಹೆಚ್ 66 ರ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.

ವೇಶ್ಯಾವಾಟಿಕೆ ಆರೋಪ: ಮುರ್ಡೇಶ್ವರದಲ್ಲಿ ಹೊಟೇಲ್ ಮೇಲೆ ದಾಳಿ: ನಾಲ್ವರು ವಶಕ್ಕೆ

ಕೋಲಾ ಪ್ಯಾರಡೈಸ್ ರಸ್ತೆಯಿಂದ ಬಂದ ಖಾಸಗಿ ಶಾಲೆಯ ವಾಹನವೊಂದು ಹಠಾತ್ತಾಗಿ ಇವರ ಮೇಲೆ ಎಗರಿ ಬಂದಿದೆ ಎನ್ನಲಾಗಿದೆ. ಈ ಅವಘಡ ಸಂಭವಿಸುವ ಮಂಚೆಯೇ ಏಚ್ಚೆತ್ತುಕೊಂಡು ಬೇಜವಾಬ್ದಾರಿ ಚಾಲನೆಯ ಬಗ್ಗೆ ಚಾಲಕನನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಚಾಲಕ ನಡುರಸ್ತೆಯಲ್ಲಿ ತನ್ನ ವಾಹನವನ್ನು ನಿಲ್ಲಿಸಿ ಏಕಾಏಕಿ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪ್ರಮುಖರು, ಹಿಂದೂ ಜಾಗರಣಾ ವೇಧಿಕೆಯ ಸದಸ್ಯರು ಹಾಜರಿದ್ದು ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಇತ್ತೀಚೆಗೆ ಶಾಲಾ ಕಾಲೇಜುಗಳ ವಾಹನಗಳು ಅತಿವೇಗ ಹಾಗೂ ಅಜಾಗರೂಕವಾಗಿ ವಾಹನ ಚಲಾಯಿಸುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿದ್ದು, ಶಾಲಾ ವಾಹನಗಳ ಅತಿ ವೇಗದ ಚಾಲನೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಸಂಬoಧಪಟ್ಟ ಇಲಾಖೆಯ ಮೇಲಿದೆ.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button