ಶೇಕಡಾ 5 ದಾಟಿದ ಪಾಸಿಟಿವಿಟಿ ದರ: ಎರಡು ಡೋಸ್ ಪಡೆದವರಲ್ಲೂ ಕಾಣಿಸಿಕೊಳ್ಳುತ್ತಿದೆ ಸೋಂಕು: ಬೂಸ್ಟರ್ ಡೋಸ್ ಪಡೆದ 7 ಮಂದಿಗೆ ಪಾಸಿಟಿವ್

ಮತ್ತೊಂದು ಪೊಲೀಸ್ ಠಾಣೆ ಸೀಲ್‌ಡೌನ್

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕು ಹರಡುವಿಕೆ ದರ ಶೇ. 5.17 ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಜಿಲ್ಲೆಯ ಶಿರಸಿ ಹಾಗೂ ಕಾರವಾರದ ಪ್ರಯೋಗಾಲಯಗಳಲ್ಲಿ ದಿನಕ್ಕೆ ಸರಾಸರಿ 5 ಸಾವಿರ ಜನರ ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ.

ವಾರದ ಹಿಂದೆ ಶೇ. 1 ಕ್ಕಿಂತ ಕಡಿಮೆ ಇದ್ದ ಪಾಸಿಟಿವಿಟಿ ರೇಟ್ ಇದೀಗ ಶೇ 5 ಕ್ಕಿಂತ ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳ ಪೈಕಿ ಕೋವಿಡ್ ಲಸಿಕೆ ಪಡೆದ 766 ಜನರಿಗೆ, ಲಸಿಕೆ ಪಡೆಯದ 82 ಜನರಿಗೆ ಕರೋನಾ ಸೋಂಕು ತಗುಲಿದೆ. ಒಟ್ಟೂ ಸೋಂಕಿತರಲ್ಲಿ 702 ಜನ ಎರಡು ಡೋಸ್ ಪಡೆದವರು, 57 ಜನ ಮೊದಲ ಡೋಸ್ ಮತ್ರ ಪಡೆದವರು ಹಾಗೂ ಹಾಗೂ 7 ಜನ ಬೂಸ್ಟರ್ ಡೋಸ್ ಸಹ ಪಡೆದವರಾಗಿದ್ದಾರೆ.

ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿರುವ ಪೊಲೀಸರಿಗೂ ಕೋವಿಡ್ ವಕ್ಕರಿಸುತ್ತಿದೆ. ದಿನದಿಂದ ದಿನಕ್ಕೆ ಪೊಲೀಸ್ ಸಿಬ್ಬಂದಿಗಳಲ್ಲಿ ಸೋಂಕು ಹೆಚ್ಚುತ್ತಿದ್ದು,ಇದೀಗ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ 6 ಸಿಬ್ಬಂದಿಗಳಿಗೆ ಕರೋನಾ ಪಾಸಿಟಿವ್ ದೃಢಪಟ್ಟಿದ್ದು,ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮೊನ್ನೆಯಷ್ಟೆ ಗ್ರಾಮೀಣ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು.

ಚಿತ್ರದುರ್ಗ,ಕಡೂರಿನಲ್ಲಿ ವಿಶೇಷ ಟ್ರೈನಿಂಗ್ ಮುಗಿಸಿ ಬಂದ ಈರ್ವರು ಸಿಬ್ಬಂದಿಗಳಿಗೆ ಹಾಗೂ ಉಳಿದ ನಾಲ್ಕು ಸಿಬ್ಬಂದಿಗಳಿಗೆ ಕೊರೋನಾ ಪತ್ತೆಯಾಗಿದೆ.ಠಾಣೆಗೆ ಬಂದ ಸಾರ್ವಜನಿಕರಿಗೆ ಹೊರಗೆ ವಿಚಾರಣೆ ನಡೆಸಿ ಕಳುಹಿಸಲಾಗುತ್ತಿದೆ. ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಉಳಿದ ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ಬ್ಯುರೋ ರಿಪೋರ್ಟ್, ವಿಸ್ಮಯ ನ್ಯೂಸ್.

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ

Exit mobile version