ಉತ್ತರಕನ್ನಡದಲ್ಲಿ ಇಂದು ಸ್ವಲ್ಪ ಇಳಿಕೆ ಕಂಡ ಕೋವಿಡ್: ಒಂದು ಸಾವು: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡದಲ್ಲಿ ಕಳೆದ ಎರಡು ದಿನಕ್ಕೆ ಹೋಲಿಸಿದೆ ಇಂದು ಕೇಸ್‌ಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಜಿಲ್ಲಾಡಳಿತದ ಬಿಡುಗಡೆ ಮಾಡಿದ ಹೆಲ್ತ ಬುಲೆಟಿನ್ ನ ಪ್ರಕಾರ ಇಂದು 225 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಕಾರವಾರದಲ್ಲಿ ಓರ್ವ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಕಾರವಾರದಲ್ಲಿ 102, ಹೊನ್ನಾವರ 26, ಅಂಕೋಲಾದಲ್ಲಿ 12, ಕುಮಟಾದಲ್ಲಿ 29, ಭಟ್ಕಳದಲ್ಲಿ 21, ಶಿರಸಿಯಲ್ಲಿ 18, ಸಿದ್ದಾಪುರದಲ್ಲಿ 6, ಯಲ್ಲಾಪುರದಲ್ಲಿ 2, ಹಳಿಯಾಳದಲ್ಲಿ 7, ಮತ್ತು ಜೋಯಿಡಾದಲ್ಲಿ ಇಬ್ಬರು ಸೇರಿ ಒಟ್ಟೂ 225 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 1719 ಆಗಿದ್ದು, ಅವರಲ್ಲಿ 80 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1639 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version