ಹೊನ್ನಾವರ: ತಾಲೂಕಿನಲ್ಲಿ ಇಂದು ಒಟ್ಟು 53 ಜನರಲ್ಲಿ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಹೊನ್ನಾವರ ಪಟ್ಟಣದಲ್ಲಿ-14- ಗ್ರಾಮೀಣ ಭಾಗದಲ್ಲಿ-39 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ,
ಹೊನ್ನಾವರ ಪಟ್ಟಣದ 37 ವರ್ಷದ ಮಹಿಳೆ, 34 ವರ್ಷದ ಪುರುಷ, 70 ವರ್ಷದ ಮಹಿಳೆ, 46 ವರ್ಷದ ಪುರುಷ, ಪ್ರಭಾತನಗರ 16 ವರ್ಷದ ಬಾಲಕಿ, 40 ವರ್ಷದ ಪುರುಷ, 20 ವರ್ಷದ ಯುವತಿ, 21 ವರ್ಷದ ಯುವಕ, 20 ವರ್ಷದ ಯುವತಿ, 22 ವರ್ಷದ ಯುವಕ, 28 ವರ್ಷದ ಯುವತಿ, 59 ವರ್ಷದ ಪುರುಷ, ಸಾಲೇಹಿತಲ್ಲದ 18 ವರ್ಷದ ಯುವತಿ, 52 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.
ಹೊಸಾಕುಳಿಯ 43 ವರ್ಷದ ಮಹಿಳೆ, ಮುಗ್ವಾ ಸುಬ್ರಹ್ಮಣ್ಯದ 46 ವರ್ಷದ ಪುರುಷ, ಸಾಲಕೋಡನ 38 ವರ್ಷದ ಮಹಿಳೆ, ಚಂದಾವರದ 34 ವರ್ಷದ ಯುವಕ, 31 ವರ್ಷದ ಯುವಕ, 66 ವರ್ಷದ ಪುರುಷ, 14 ವರ್ಷದ ಬಾಲಕ, 52 ವರ್ಷದ ಪುರುಷ, 15 ವರ್ಷದ ಬಾಲಕಿಗೆ ಸೋಂಕು ಕಾಣಿಸಿಕೊಂಡಿದೆ.
ಕಡತೋಕಾದ 19 ವರ್ಷದ ಯುವತಿ, ಕಡ್ನೀರದ 50 ವರ್ಷದ ಮಹಿಳೆ, 14 ವರ್ಷದ ಬಾಲಕ, ಕಾಸರಕೋಡಿನ 60 ವರ್ಷದ ಮಹಿಳೆ, 18 ವರ್ಷದ ಯುವಕ, 45 ವರ್ಷದ ಮಹಿಳೆ, 29 ವರ್ಷದ ಮಹಿಳೆ, ಮಂಕಿಯ 70 ವರ್ಷದ ಪುರುಷ, 55 ವರ್ಷದ ಮಹಿಳೆ, 14 ವರ್ಷದ ಬಾಲಕಿ, 15 ವರ್ಷದ ಬಾಲಕ, 15 ವರ್ಷದ ಬಾಲಕ, 14 ವರ್ಷದ ಬಾಲಕಿ 14 ವರ್ಷದ ಬಾಲಕ, 18 ವರ್ಷದ ಯುವಕನಿಗೆ ಪಾಸಿಟಿವ್ ಬಂದಿದೆ.
ಮೋಳ್ಕೋಡನ 21 ವರ್ಷದ ಯುವತಿ, 48 ವರ್ಷದ ಮಹಿಳೆ, 15 ವರ್ಷದ ಬಾಲಕ, 50 ವರ್ಷದ ಮಹಿಳೆ, ಇಡಗುಂಜಿಯ 21 ವರ್ಷದ ಯುವತಿ, 40 ವರ್ಷದ ಮಹಿಳೆ, 13 ವರ್ಷದ ಬಾಲಕ, 43 ವರ್ಷದ ಪುರುಷ, 16 ವರ್ಷದ ಬಾಲಕ, ಸಂಶಿಯ 17 ವರ್ಷದ ಬಾಲಕ, 13 ವರ್ಷದ ಬಾಲಕ, 49 ವರ್ಷದ ಪುರುಷ, ಜನಕಡ್ಕಲನ 30 ವರ್ಷದ ಯುವತಿ, 37 ವರ್ಷದ ಮಹಿಳೆ, ಖರ್ವಾದ 26 ವರ್ಷದ ಯುವತಿ ಸೇರಿದಂತೆ ಒಟ್ಟು 53 ಜನರಲ್ಲಿ ಸೋಂಕು ಕಾಣಿಸಿಕೊಂಡಂತಾಗಿದೆ,
ಅಂಕೋಲಾದಲ್ಲಿ ಇಂದು 69 ಕೇಸ್.
ಅಂಕೋಲಾ : ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ, ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಮಂಗಳವಾರ
70 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರೆ, ಬುಧವಾರ ಮತ್ತೆ 69 ಹೊಸ ಕೋವಿಡ್ ಕೇಸ್ ಕಾಣಿಸಿಕೊಂಡಿದೆ.
ಈ ಮೂಲಕ ತಾಲೂಕಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 183 ಕ್ಕೆ ಏರಿಕೆ ಆಗಿದೆ. ಸೋಂಕು ಮುಕ್ತರಾದ 40 ಜನರು ಈ ದಿನದ ಬಿಡುಗಡೆಗೊಂಡವರ ಯಾದಿಯಲ್ಲಿದ್ದಾರೆ. ಕೋವಿಡ್ ಮೊದಲನೇ ಅಲೆಯಿಂದ ಹಿಡಿದು ಈವರೆಗೆ ಒಟ್ಟೂ ಸೋಂಕಿಗೆ ಒಳಗಾದವರ ಸಂಖ್ಯೆ 4039 ಕ್ಕೆ ತಲುಪಿದೆ. ಈಗಿರುವ 183 ಸೋಂಕಿತರೆಲ್ಲರೂ ಹೊಂ ಐಸೋಲೇಶನ್ ನಲ್ಲಿಯೇ ಇದ್ದಾರೆ.
ಸಮಾಜದ ಮೇಲುಸ್ತರದ ವ್ಯಕ್ತಿಗಳು ಎನಿಸಿಕೊಳ್ಳುವ ಇಲಾಖೆಯ ಒಂದಿಬ್ಬರು ಅಧಿಕಾರಿ ಹಾಗೂ ಸಿಬ್ಬಂದಿ, ಕಾಲೇಜ ಉಪನ್ಯಾಸಕ ಸೇರಿ ಇನ್ನು ಕೆಲವರು ಅದಾವುದೋ ಕಾರಣಗಳಿಂದ ತಮಗೆ ಕೋವಿಡ್ ಪಾಸಿಟಿವ್ ಬಂದಿರುವುದು ಗೊತ್ತಿದ್ದೂ,ಅದನ್ನು ಇತರರಿಂದ ಮುಚ್ಚಿಡುವ ಪ್ರಯತ್ನ ಮಾಡಿ,ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ,ಕಾಲೇಜಿನಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದರು ಎನ್ನಲಾಗಿದೆ.
ಬುದ್ಧಿವಂತರೆನಿಸಿಕೊಂಡ ಇವರ ಸಾಮಾಜಿಕ ಕಳಕಳಿಯ ಅತಿ ಬುದ್ಧಿವಂತಿಕೆ,ಸಂಬಂಧಿಸಿದ ಅದೇ ಇಲಾಖೆಯ ಇತರೆ ಸಿಬ್ಬಂದಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿ ಹಾಗೂ ಪಾಲಕ ವಲಯದ ಕೆಲವರ ಅಸಮಾಧಾನಕ್ಕೂ ಕಾರಣವಾದಂತಿದೆ.ಸೋಂಕು ಪೀಡಿತರು ತಮಗೆ ಸೋಂಕಿರುವ ವಿಷಯವನ್ನು ಮುಚ್ಚಿಡುವುದರಿಂದ ಅವರ ಸಂಪರ್ಕದಿಂದ ಜನರಿಗೆ ರೋಗ ಹಬ್ಬಿದರೆ ಜವಾಬ್ದಾರಿ ಯಾರು ಎನ್ನುವ ಪ್ರಶ್ನೆಗೆ,ಸೋಂಕಿನ ವಿಷಯ ಮುಚ್ಚಿಟ್ಟುಕೊಳ್ಳುವ ಯತ್ನ ಮಾಡಿದವರೇ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
20 ರ ಗುರುವಾರ ತಾಲೂಕಾ ಆಸ್ಪತ್ರೆ ಅಂಕೋಲಾ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾರವಾಡಾ, ಉಪ ಕೇಂದ್ರ ಲಕ್ಷ್ಮೇಶ್ವರ, ಗಾಬಿತ ಕೇಣಿ, ಕಂತ್ರಿ, ಗುಂಡಬಾಳ, ಅಚವೆ, ಸುಂಕಸಾಳ ವ್ಯಾಪ್ತಿಯಲ್ಲಿ ಕೋವಿಡ್ ವ್ಯಾಕ್ಸಿನೇಷನ್ ನಡೆಯಲಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ ಮತ್ತು ಶ್ರೀಧರ್ ನಾಯ್ಕ ಹೊನ್ನಾವರ