ಹೊನ್ನಾವರ: ತಾಲೂಕಿನಲ್ಲಿ ಇಂದು ಒಟ್ಟು 100 ಜನರಲ್ಲಿ ಕರೋನಾ ಪಾಸಿಟಿವ್ ಪತ್ತೆಯಾಗಿದೆ. ಪಟ್ಟಣದಲ್ಲೇ ಅರ್ಧಕ್ಕಿಂತ ಹೆಚ್ಚು ಕೇಸ್ ದಾಖಲಾಗಿದೆ. ಪಟ್ಟಣದಲ್ಲಿ ವರದಿಯಾದ ಸೋಂಕಿತರ ಪೈಕಿ 29 ಜನರು ವಿದ್ಯಾರ್ಥಿಗಳಾಗಿರುವುದು ತೀವ್ರ ಆತಂಕ್ಕೆ ಕಾರಣವಾಗಿದೆ.
ಹೊನ್ನಾವರ ಪಟ್ಟಣದ 36 ವರ್ಷದ ಮಹಿಳೆ, 72 ವರ್ಷದ ಪುರುಷ, 66 ವರ್ಷದ ಪುರುಷ, ಬಂದರ ರಸ್ತೆಯ ವರ್ಷದ ಯುವಕ, ಗಾಂದಿನಗರದ 36 ವರ್ಷದ ಮಹಿಳೆ, 31 ವರ್ಷದ ಯುವತಿ, 11 ವರ್ಷದ ಬಾಲಕಿ, 55 ವರ್ಷದ ಪುರುಷ, 21 ವರ್ಷದ ಯುವತಿ, 40 ವರ್ಷದ ಮಹಿಳೆ, 10 ವರ್ಷದ ಬಾಲಕಿ 65 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಪ್ರಭಾತನಗರದ ವಿವಿದ ಹೈಸ್ಕೂಲ್ ಕಾಲೇಜು ವಿದ್ಯಾರ್ಥಿಗಳಾದ 18 ವರ್ಷದ ಯುವಕ, 15 ವರ್ಷದ ಬಾಲಕಿ, 19 ವರ್ಷದ ಯುವತಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕ, 15 ವರ್ಷದ ಬಾಲಕ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 20 ವರ್ಷದ ಯುವಕ, 20 ವರ್ಷದ ಯುವಕ, 20 ವರ್ಷದ ಯುವಕ, 20 ವರ್ಷದ ಯುವತಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 18 ವರ್ಷದ ಯುವಕ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 16 ವರ್ಷದ ಬಾಲಕಿ, 15 ವರ್ಷದ, ಬಾಲಕ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕನಿಗೆ ಪಾಸಿಟಿವ್ ಬಂದಿದೆ.
ಕರ್ಕಿಯ 12 ವರ್ಷದ ಬಾಲಕ, ಕೋಣಕಾರದ 70 ವರ್ಷದ ಮಹಿಳೆ, ಅಗ್ರಹಾರದ 28 ವರ್ಷದ ಯುವತಿ, 28 ವರ್ಷದ ಯುವಕ, ಅರೇಂಗಡಿಯ 72 ವರ್ಷದ ಮಹಿಳೆ, ಕಡ್ಲೆಯ 18 ವರ್ಷದ ಯುವಕ, ಮಾವಿನಕುರ್ವಾದ 21 ವರ್ಷದ ಯುವಕ, 34 ವರ್ಷದ ಯುವತಿ, 14 ವರ್ಷದ ಬಾಲಕ, 10 ವರ್ಷದ ಬಾಲಕಿ, ತನ್ಮಡಗಿಯ 62 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಮಂಕಿಯ 29 ವರ್ಷದ ಯುವತಿ, ಕೋಡಾಣಿಯ 30 ವರ್ಷದ ಯುವಕ, ಖರ್ವಾದ 21 ವರ್ಷದ ಯುವಕ, 21 ವರ್ಷದ ಯುವಕ, ಸೇರಿದಂತೆ ಇಂದು ತಾಲೂಕಿನಲ್ಲಿ ಒಟ್ಟೂ 100 ಜನರಲ್ಲಿ ಸೋಕು ಕಾಣಿಸಿಕೋಂಡಿದ್ದು ಅತಿ ಹೆಚ್ಚು ವಿದ್ಯಾರ್ಥಿಗಳೇ ಆಗಿರುವುದು ಆತಂಕವನ್ನು ಉಂಟುಮಾಡಿದೆ.
ಅಂಕೋಲಾದಲ್ಲಿ ಇಂದು 52 ಪಾಸಿಟಿವ್ ಕೇಸ್: ಹೆಸರಾಂತ ಕಾಲೇಜ್ ನ ತರಗತಿಗಳಿಗೆ ವಾರದ ಮಟ್ಟಿಗೆ ಬೀಗ ?
ಅಂಕೋಲಾ : ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ, ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಮಂಗಳವಾರ
70 , ಬುಧವಾರ 69 ಕೋವಿಡ್ ಪಾಸಿಟಿವ್ ಕೇಸ್ ದಾಖಲಾದ ಬೆನ್ನಿಗೇ ಗುರುವಾರ ಮತ್ತೆ 52 ಹೊಸ ಕೇಸಗಳು ದಾಖಲಾಗುವ ಮೂಲಕ ತಾಲೂಕಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 196 ಕ್ಕೆ ಏರಿಕೆ ಆಗಿದೆ.
ಸೋಂಕು ಮುಕ್ತರಾದ 33 ಜನರು ಈ ದಿನದ ಬಿಡುಗಡೆಗೊಂಡವರ ಯಾದಿಯಲ್ಲಿದ್ದಾರೆ. ಕೋವಿಡ್ ಮೊದಲನೇ ಅಲೆಯಿಂದ ಹಿಡಿದು ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 4085ಕ್ಕೆ ತಲುಪಿದೆ. ಸಕ್ರೀಯ ಸೋಂಕಿತರ ಯಾದಿಯಲ್ಲಿರುವ ಎಲ್ಲಾ 196 ಜನರೂ ಹೊಂ ಐಸೋಲೇಶನ್ ನಲ್ಲಿ ಇದ್ದಾರೆ.
ಪಟ್ಟಣದ ಖಾಸಗಿ ನರ್ಸಿಂಗ್ ಕಾಲೇಜ್ ನಲ್ಲಿ ಇತ್ತೀಚಿಗೆ ಹೆಚ್ಚಿನ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದವು.ಅದಾದ ನಂತರ ಪಟ್ಟಣದ ಪ್ರತಿಷ್ಠಿತ ಕಾಲೇಜೊಂದರಲ್ಲಿ, 13ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ,ಆ ಕಾಲೇಜನ್ನು ಸೀಲ್ ಡೌನ್ ಮಾಡಲಾಗಿದೆ ಎನ್ನಲಾಗಿದ್ದು, ತಾತ್ಕಾಲಿಕವಾಗಿ 7 ದಿನಗಳ ಮಟ್ಟಿಗೆ ಕಾಲೇಜ್ ಬಂದ್ ಆಗಲಿದೆ ಎಂದು ತಿಳಿದು ಬಂದಿದೆ.
ಇಲ್ಲಿಯ ಪ್ರಾಧ್ಯಾಪಕರೋರ್ವರು ಹೊರ ರಾಜ್ಯ ಪ್ರವಾಸ ಮುಗಿಸಿ ಬಂದಿದ್ದು, ಅವರು ಅಲ್ಲಿ ಕ್ಯಾರಂಟೈನ್ ಗೆ ಒಳ ಪಟ್ಟಿದ್ದರು ಎನ್ನಲಾಗಿದ್ದು, ಕರ್ನಾಟಕಕ್ಕೆ ಬಂದು ಇಲ್ಲಿಯ ಬದಲಾದ ಹೊಸ ಮಾರ್ಗಸೂಚಿ ಪ್ರಕಾರ ಅಥವಾ ಇನ್ನಿತರ ಕಾರಣಗಳಿಂದ ಕರ್ತವ್ಯಕ್ಕೆ ಹಾಜರಾಗಿದ್ದರು ಎನ್ನಲಾಗಿತ್ತು.
ನಂತರ ನಾನಾ ರೀತಿಯ ಉಹಾ ಪೋಹಗಳೆದ್ದಿದ್ದು, ಆ ಅಧ್ಯಾಪಕರಿಂದಲೇ ಸೋಂಕು ಪ್ರಸರಣ ವಾಯಿತೇ ? ಅಥವಾ ಅದು ಕಾಕತಾಳೀಯವೇ ಎಂಬ ಪ್ರಶ್ನೆ ಕೆಲವರಲ್ಲಿ ಕಾಡಲಾರಂಭಿಸಿದೆ. ಈ ನಡುವೆ ಎಲ್ಲರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಕಾಲೇಜ್ ಸಿಬ್ಬಂದಿಗಳು,ಹೆಚ್ಚಿನ ವಿದ್ಯಾರ್ಥಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದ್ದು , ಹಲವರ ಪರೀಕ್ಷಾ ವರದಿ ಬರಬೇಕಿದೆ.
ಈಗಾಗಲೇ 13ಕ್ಕೂ ಹೆಚ್ಚು ಜನರಲ್ಲಿ ಕೋವಿಡ್ ದೃಢ ಪಟ್ಟಿರುವುದರಿಂದ, ಈ ಪ್ರದೇಶವನ್ನು ಕೋವಿಡ್ ಕಂಟೇ ನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಸದ್ಯ ಕಾಲೇಜ್ ತರಗತಿಗಳು ಒಂದು ವಾರದ ಮಟ್ಟಿಗೆ ಬೀಗ ಜಡಿದುಕೊಂಡಿದ್ದು,ವಿದ್ಯಾರ್ಥಿಗಳು ಮನೆಯಲ್ಲಿದ್ದುಕೊಂಡೆ ಆನ್ಲೈನ್ ಅಭ್ಯಾಸ ಮಾಡಬೇಕಿದೆ. ಕೊವಿಡ ಪರೀಕ್ಷಾ ಸಂಖ್ಯೆ ಆಧರಿಸಿ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಿದರೂ ಆಶ್ಚರ್ಯ ಪಡಬೇಕಿಲ್ಲ ಎಂಬ ಮಾತು ಕೇಳಿಬಂದಿದೆ.
ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ವಿಲಾಸ ನಾಯಕ ಅಂಕೋಲಾ