ಅಂಬಿಗರ ಚೌಡಯ್ಯ ದಿನಾಚರಣೆ: ಸರಳ ವಚನಗಳ ಮೂಲಕ ಸಮಾಜದ ಅನಿಷ್ಟ ಪದ್ಧತಿ ತೊಡೆದು ಹಾಕಲು ಯತ್ನಿಸಿದ್ದ ಮಹಾನ್ ಪುರುಷ

ಅಂಕೋಲಾ: ತಾಲೂಕು ಆಡಳಿತ ಮತ್ತು ತಾಲೂಕು ರಾಷ್ಟ್ರೀಯ ಉತ್ಸವ ಆಚರಣೆ ಸಮಿತಿ ಅಂಕೋಲಾ ಇವರ ವತಿಯಿಂದ ಅಂಬಿಗರ ಚೌಡಯ್ಯ ದಿನಾಚರಣೆಯನ್ನು ಅಂಕೋಲಾ ತಾಲೂಕಿನ ತಹಶೀಲ್ಧಾರರ ಕಾರ್ಯಾಲಯದಲ್ಲಿ ಜನವರಿ 21 ರ ಶುಕ್ರವಾರ ಬೆಳಿಗ್ಗೆ ಆಚರಿಸಲಾಯಿತು.
ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ತಹಶೀಲ್ಧಾರ ಉದಯ ಕುಂಬಾರ ಮತ್ತು ಇಲಾಖೆ ಇತರೆ ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.

ಸರಳ ಕಾರ್ಯಕ್ರಮ ಉದ್ದೇಶಿಸಿ ತಹಶೀಲ್ದಾರ ಉದಯ ಕುಂಬಾರ ಮಾತನಾಡಿ, ಸಮಾಜದಲ್ಲಿ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು 12 ನೇ ಶತಮಾನದಲ್ಲಿಯೇ ಅಂಬಿಗರ ಚೌಡಯ್ಯ ತಮ್ಮ ಸರಳ ವಚನಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.

ಬಸವಣ್ಣನವರ ಅನುಭವ ಅಂಕೋಲಾ: ತಾಲೂಕು ಆಡಳಿತ ಮತ್ತು ತಾಲೂಕು ರಾಷ್ಟ್ರೀಯ ಉತ್ಸವ ಆಚರಣೆ ಸಮಿತಿ ಅಂಕೋಲಾ ಇವರ ವತಿಯಿಂದ ಅಂಬಿಗರ ಚೌಡಯ್ಯ ದಿನಾಚರಣೆಯನ್ನು ಅಂಕೋಲಾ ತಾಲೂಕಿನ ತಹಶೀಲ್ಧಾರರ ಕಾರ್ಯಾಲಯದಲ್ಲಿ ಆಚರಿಸಲಾಯಿತು.

ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ತಹಶೀಲ್ಧಾರ ಉದಯ ಕುಂಬಾರ ಅವರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು 12 ನೇ ಶತಮಾನದಲ್ಲಿಯೇ ಅಂಬಿಗರ ಚೌಡಯ್ಯ ತಮ್ಮ ಸರಳ ವಚನಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು, ಕಾಯಕದ ಮೂಲಕ ಸಮಾಜ ತಿದ್ದಲು ಪ್ರಯತ್ನಿಸಿದ ಮಹಾಪುರುಷ ಅಂಬಿಗ ಚೌಡಯ್ಯ ಎಂದರು.

ಈ ಸಂದರ್ಭದಲ್ಲಿ ಶಿರಸ್ತೇದಾರರಾದ ಗಿರೀಶ ಜಾಂಬವಳಿಕರ್, ಸುರೇಶ ಹರಿಕಂತ್ರ, ಎ.ವಿ.ನಾಯ್ಕ, ಎ.ಎನ್. ಮುಂಡಾಸ್, ಅನುಪಮಾ ನಾಯ್ಕ ಗ್ರಾಮ ಲೆಕ್ಕಿಗ ಭಾರ್ಗವ ನಾಯಕ, ಕಂದಾಯ ನಿರೀಕ್ಷಕ ರಾಘವೇಂದ್ರ ಜನ್ನು, ಆಹಾರ ನಿರೀಕ್ಷಕ ಸಂತೋಷ ಯಳಗದ್ದೆ, ಸರ್ವೆ ಸುಪರ್ವೈಜರ್ ಸುರೇಶ ಅಗೇರ, ಇತರೆ ಸಿಬ್ಬಂದಿಗಳು, ಕಂದಾಯ ಇಲಾಖೆ ನೌಕರರು – ಸಿಬ್ಬಂದಿಗಳು ಹಾಜರಿದ್ದರು. .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version