ಅoಕೋಲಾ: ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್ ವೊಂದು ಪಲ್ಟಿಯಾಗಿ ಅದರಲ್ಲಿದ್ದ ರಾಸಾಯನಿಕ ಹೊರಗೆ ಚಿಲ್ಲಿ ರಸ್ತೆಯಂಚಿನ ಹೊಲಗದ್ದೆಗಳಲ್ಲಿ ಸೇರಿಕೊಂಡಿದೆ. ಸಕ್ಕರೆಯ ಉಪ ಉತ್ಪಾದನೆಗಳಲ್ಲಿ ಬಂದಾಗ ಮೊಲಾಸಿಸ್ ಎಂದು ಕರೆಸಿಕೊಳ್ಳುವ ಕಾಕಂಬಿಯನ್ನು ಸಾಗಿಸುತ್ತಿದ್ದ ಟ್ಯಾಂಕರ್ ವೊಂದು ರಾಷ್ಟ್ರೀಯ ಹೆದ್ದಾರಿ 63 ರ ಯಲ್ಲಾಪುರ -ಅಂಕೋಲಾ ಮಾರ್ಗಮಧ್ಯೆ ರಾಮನಗುಳಿ ಬಳಿ ಪಲ್ಟಿಯಾಗಿದೆ.
ಚಾಲಕನ ಅಜಾಗರೂಕತೆ ಮತ್ತು ಅತಿವೇಗದ ಚಾಲನೆಯೇ ಈ ರಸ್ತೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಟ್ಯಾಂಕರ್ ಲಾರಿ ರಸ್ತೆಯಂಚಿನ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದೆ.ಅಪಘಾತದಿಂದ ಟ್ಯಾಂಕರ್ ಚಾಲಕ ಗಾಯಗೊಂಡಿದ್ದು ಚಿಕಿತ್ಸೆಗಾಗಿ,ಆಂಬುಲೆನ್ಸ್ ಮೂಲಕ ಅಂಕೋಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್ ನಲ್ಲಿ ತುಂಬಿದ್ದ ಕಾಕಂಬಿ ದ್ರಾವಣ ರಸ್ತೆಯ ಮೇಲೆ ಹರಿದು ಅಕ್ಕ ಪಕ್ಕದ ಹೊಲ ಗದ್ದೆಗಳಿಗೆ ಸೇರುತ್ತಿರುವುದು ಕಂಡು ಬಂದಿದೆ.
ಟ್ಯಾಂಕರ್ ಸವದತ್ತಿಯಿಂದ ಕಡೆಯಿಂದ ಕಾರವಾರ ಬಂದರು. ಪ್ರದೇಶದೆಡೆಗೆ ಸಾಗುತ್ತಿತ್ತು ಎನ್ನಲಾಗಿದೆ.ಟ್ಯಾಂಕರ್ ನಲ್ಲಿದ್ದ ಕಾಕಂಬಿ ದ್ರಾವಣ ಹೊರ ಚೆಲ್ಲಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಬೆಲ್ಲದ ಕೊಳೆಯ ವಾಸನೆ ಜೋರಾಗಿ ಹರಡಿದ್ದು,ಕಪ್ಪು ಮಿಶ್ರಿತ ದ್ರಾವಣವನ್ನು ಕೆಲವರು ಬೆಲ್ಲ ಎಂದು ತಿಳಿದರೆ,ಇನ್ನು ಕೆಲವರು ಇದನ್ನು ಕಳ್ಳಬಟ್ಟಿ ಸರಾಯಿಗೆ ಬಳಸಬಹುದು ಎಂದು ತಮ್ಮಲ್ಲಿ ಮಾತನಾಡಿಕೊಂಡoತೆ ಇದ್ದು,ಅಲ್ಪ-ಸ್ವಲ್ಪ ಪ್ರಮಾಣದಲ್ಲಿ ತುಂಬಿಕೊoಡು ಹೋದರು ಎನ್ನಲಾಗಿದೆ.
ಸರಾಯಿ ತಯಾರಿಸುವ ಡಿಸ್ಟಿಲರಿ ಗಳು ಕಾಕಂಬಿ ದ್ರಾವಣವನ್ನು ಮಧ್ಯ ತಯಾರಿಕೆಗೆ ಬಳಸುತ್ತಾರೆ ಎನ್ನಲಾಗಿದೆ.ಈ ಕುರಿತು ಸಂಜೆಯವರೆಗೂ ಯಾವುದೇ ಪೋಲೀಸ್ ಪ್ರಕರಣ ದಾಖಲಾಗದಿರುವುದರಿಂದ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ