ಹೊನ್ನಾವರ: ಕಳೆದ ಒಂದು ತಿಂಗಳಿoದ ತಾಲೂಕಿನ ಅಪ್ಸರಕೊಂಡ ಕಾಸರಕೊಡ್ ಕಡಲ ತೀರಗಳಲ್ಲಿ ಕಡಲಾಮೆಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಡುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಮೀನುಗಾರರು ಕಡಲಾಮೆಯ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಜನವರಿ ತಿಂಗಳಿನಿoದ ಇಲ್ಲಿಯವರೆಗೆ ಒಟ್ಟು 5 ಕಡಲಾಮೆಗಳು ಮೃತಪಟ್ಟಿವೆ. ಸೋಮವಾರ ಸಾಯಂಕಾಲ ಇಕೋ ಬೀಚ್ ಕಡಲ ತೀರದಲ್ಲಿ ಬೃಹದಾಕಾರದ ಕಡಲಾಮೆ ಕಳೇಬರ ಪತ್ತೆಯಾಗಿತ್ತು,
ಇದೀಗ ಅಪ್ಸರಕೊಂಡ ಕಡಲ ತೀರದಲ್ಲಿ ಮತ್ತೊಂದು ಆಮೆ ಗಾಯಗೊಂಡು ಮೃತ ಪಟ್ಟಿರುವುದು ಪತ್ತೆಯಾಗಿದೆ. ಒಂದೆಡೆ ಕಡಲಾಮೆಗಳ ಸರಣಿ ಸಾವು ಮೀನುಗಾರಿಕೆ ಅನುಮಾನ ಹುಟ್ಟುಹಾಕಿದ್ದು, ಈ ಸಾವುಗಳು ಸಹಜವೋ ಅಥವಾ ಉದ್ದೇಶಪೂರ್ವಕವಾಗಿ ಆಮೆಗಳ ಮಾರಣ ಹೋಮ ನಡೆಸಲಾಗುತ್ತಿದೆಯೋ? ಎನ್ನುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ವಿಸ್ಮಯ ನ್ಯೂಸ್, ಹೊನ್ನಾವರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.