ಭಟ್ಕಳ: ಈಜಾಡಲು ಹೋಗಿ ಅಲೆಯ ರಭಸದಿಂದಾಗಿ ಮುಳುಗುತ್ತಿದ್ದ ಓರ್ವ ಯುವಕನನ್ನು ಮುರುಡೇಶ್ವರದಲ್ಲಿ ಲೈಪ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಮುರುಡೇಶ್ವರದಲ್ಲಿ ನಡೆದಿದೆ. ರಕ್ಷಣೆ ಮಾಡಿದ ಯುವಕನ್ನು ಮೈಸೂರಿನ ಹರ್ಷ ಎನ್ ಎಂದು ಗುರುತಿಸಲಾಗಿದೆ.
ಈತ ಶಿರಸಿ ಕಾಲೇಜಿನಲ್ಲಿ ಓದುತ್ತಿದ್ದು, ತನ್ನ 8 ಮಂದಿ ಸಂಗಡಿಗರೊಂದಿಗೆ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ. ಬೆಳಿಗ್ಗೆ ದೇವಸ್ಥಾನದ ಎಡಭಾಗದ ಸಮುದ್ರದಲ್ಲಿ ಈಜಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಮುಳುಗಿದ್ದಾನೆ. ಲೈಪ್ ಗಾರ್ಡ್ ಳಾದ ಹನುಮಂತ, ಚಂದ್ರಶೇಖರ, ದತ್ತಾತ್ರೇಯ ಶೆಟ್ಟಿ ಈತನನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ.
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.