Focus News
Trending

ನಿವೃತ್ತ ಡೆಪ್ಯುಟಿ ತಹಶೀಲ್ದಾರ ಪಿ ಪಿ ನಾಯ್ಕ ವಿಧಿವಶ:  ವಿವಿಧ ಹುದ್ದೆ ಅಲಂಕರಿಸಿದ್ದ ಜನಪರ ಅಧಿಕಾರಿ

ಅಂಕೋಲಾ: ಪಟ್ಟಣ ವ್ಯಾಪ್ತಿಯ ಲಕ್ಷೇಶ್ವರ ನಿವಾಸಿ ಪದ್ಮನಾಭ ಪುಂಡಲೀಕ ನಾಯ್ಕ(82) ಫೆ. 23 ರಂದು ವಿಧಿವಶರಾದರು.                      ಕಾರವಾರ ಮೂಡಗೇರಿ ಮೂಲದವರಾದ ಇವರು 4 ದಶಕಗಳ ಹಿಂದೆಯೇ ಅಂಕೋಲಾ ತಾಲೂಕಿನ ಲಕ್ಷೇಶ್ವರ ಗ್ರಾಮಕ್ಕೆ ಬಂದು ನೆಲೆಸಿದ್ದರು. ಅಂಕೋಲಾದಲ್ಲಿ ಬಿ.ಡಿ ಓ ಕಛೇರಿಯ ಮೆನೇಜರ್ ಆಗಿ, ಪಟ್ಟಣ ಪಂಚಾಯತ  ಮುಖ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು ಕಂದಾಯ ಇಲಾಖೆಯಲ್ಲಿಯೂ ಸುದೀರ್ಘ ಸೇವೆ ಸಲ್ಲಿಸಿ ನಂತರ ಡೆಪ್ಯುಟಿ ತಹಶೀಲ್ದಾರರಾಗಿ ನಿವೃತ್ತರಾಗಿದ್ದರು.

ಉ.ಕ ಜಿಲ್ಲೆಯ ಸಿದ್ದಾಪುರ, ಕುಮುಟಾ, ಬಳಲೆ, ಅಂಕೋಲಾ, ಹಾಗೂ ಜಿಲ್ಲೆಯ ಪಕ್ಕದ ಜಮಖಂಡಿ ಸೇರಿದಂತೆ ರಾಜ್ಯದ ನಾನಾ ಭಾಗಗ ಗಳಲ್ಲಿ ಸೇವೆ ಸಲ್ಲಿಸಿ ಜನಾನುರಾಗಿ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದರು. ಸರಕಾರೀ ಸೇವಾ ನಿವೃತ್ತಿ ನಂತರ ವಕೀಲ ವೃತ್ತಿ ಕೈಗೊಂಡು, ವಯಸ್ಸಿನಿಂದ ಮುಪ್ಪು ಬರುವುದು ಸಹಜವಾದರೂ, ಬುಧ್ಧಿಮತ್ತೆಗೆ ಹಾಗೂ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಎಂದೂ ಮುಪ್ಪಿಲ್ಲ ಎಂದು ತೋರಿಸಿಕೊಟ್ಟಿದ್ದರು.

ತಾನು ವಾಸವಾಗಿದ್ದ ಮನೆಯ ಪಕ್ಕದಲ್ಲೇ ಹತ್ತಾರು ರೂಂಗಳನ್ನು ಕಟ್ಟಿಸಿ , ಕಡಿಮೆ ದರದಲ್ಲಿ ಬಾಡಿಗೆ ನೀಡಿ ಈ  ವರೆಗೆ ನೂರಾರು ಕುಟುಂಬಗಳಿಗೆ ಆಸರೆ ಒದಗಿಸಿದ್ದರು. ಮೃತರು, ಪತ್ನಿ ಪ್ರಮೀಳಾ, ಗಂಡು ಮಕ್ಕಳಾದ ಪುಂಡಲೀಕ, ಗಣೇಶ, ಸೊಸೆಯಂದಿರು, ಆರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದಾರೆ. ಪಿ.ಪಿ ನಾಯ್ಕ ಇವರ ನಿಧನಕ್ಕೆ ಊರ ನಾಗರಿಕರು ಹಾಗೂ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.           

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button