ಆಲಿವ್ ರಿಡ್ಲೆ ಆಮೆ ಮರಿಗಳು ಸಮುದ್ರಕ್ಕೆ: ಅರಣ್ಯ ಇಲಾಖೆಯಿಂದ ಸಂರಕ್ಷಣೆ

ಕಾರವಾರ: ಜಿಲ್ಲೆಯ ಅರಣ್ಯ ಇಲಾಖೆ ಫ್ಲಾಗ್‌ಶಿಪ್ ಎನಿಮಲ್ ಹಾಗೂ ಅಳಿವಿನಂಚಿನ ಪ್ರಾಣಿ ಎಂದು ಗುರುತಿಸಿರುವ ಜಿಲ್ಲೆಯ 5 ಪ್ರಾಣಿಗಳಲ್ಲಿ ಒಂದಾದ ಆಲಿವ್ ರಿಡ್ಲೆ ಆಮೆಗಳನ್ನು ತಾಲೂಕಿನ ದೇವಬಾಗ ಕಡಲ ತೀರದಲ್ಲಿ ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲಾಗಿದೆ. ಈ ಆಮೆ ಏಕಕಾಲದಲಿ ಸುಮಾರು 100 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಆದರೂ ಇತ್ತೀಚಿನ ದಿನಗಳಲ್ಲಿ ಈ ಆಮೆಗಳ ಸಂಖ್ಯೆ ತೀರಾ ಕಡಿಮೆ ಆಗುತ್ತಿದ್ದು, ಆಳಿವಿನ ಅಂಚಿಗೆ ಬಂದಿವೆ. ಹೀಗಾಗಿ ಸರ್ಕಾರ ಇವುಗಳನ್ನ ಸಂರಕ್ಷಣೆ ಮಾಡುವ ಯೋಜನೆಗೆ ಮುಂದಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version