ಶಿರಸಿ: ಭಾರತದ ಹೆಗ್ಗಳಿಕೆಯಾದ ವೈವಿಧ್ಯತೆ ನಡುವಿನ ಏಕತೆಯನ್ನು ಬಿಜೆಪಿ ಹಾಳು ಮಾಡುತ್ತಿದೆ ಎಂದು ಎಐಸಿಸಿ ಉಸ್ತುವಾರಿ ಸುದರ್ಶನ ನಾಚಿಪನ ಹೇಳಿದರು. ನಗರದ ಸುಪ್ರಿಯಾ ಇಂಟರ್ ನ್ಯಾಷನಲ್ ನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಶತಮಾನಗಳಿಂದ ಭಾರತ ವೈವಿಧ್ಯತೆ ನಡುವೆ ಏಕತೆಯನ್ನು ಉಳಿಸಿಕೊಂಡು ಬಂದಿದೆ. ದೇಶದಲ್ಲಿ ನಾನಾ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಿವೆ. ಇದನ್ನು ಹೋಗಲಾಡಿಸಿ ಏಕ ಸಂಸ್ಕೃತಿ ನಿರ್ಮಾಣ ಮಾಡಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹಿಡಿತ ಸಾಧಿಸುತ್ತಿದೆ. ಇದು ಸಂವಿಧಾನ ವಿರೋಧಿ ನಡೆ. ಇದು ರಾಷ್ಟ್ರದ ಸಂಯುಕ್ತ ವ್ಯವಸ್ಥೆಗೆ ವಿರೋಧಿಯಾಗಿದೆ. ರಾಜ್ಯಗಳ ಹಕ್ಕು ಕಸಿಯುವ ನಡೆಸರಿಯಲ್ಲ. ಕಾಂಗ್ರೆಸ್ ಇದನ್ನು ವಿರೋಧಿಸುತ್ತದೆ ಎಂದರು.
ಕಾಂಗ್ರೆಸ್ ವಿವಿಧತೆಯನ್ನು ಪೋಷಿಸುವ ಕೆಲಸ ಮಾಡುತ್ತದೆ. ನೆಹರು, ಗಾಂಧಿ, ಅಂಬೇಡ್ಕರ್ ಬಯಸಿದ್ದು ಇದನ್ನೇ. ಆದರೆ ಬಿಜೆಪಿ ಹಿಂಧುತ್ವ ಪ್ರತಿಪಾದಿಸುತ್ತದ ಕೋಮು ಭಾವನೆ ಬಿತ್ತಿ ಶಾಂತಿ ಕದಡುತ್ತಿದ್ದು, ಧರ್ಮ ರಾಜಕಾಣ ಮಾಡಲು ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜ. 2 ರಿಂದ ಸದಸ್ಯತ್ವ ಅಭಿಯಾನ ಆರಂಭಿಸಿದ್ದು, ರಾಜ್ಯದಲ್ಲಿ 1 ಕೋಟಿ ಸದಸ್ಯತ್ವ ನೋಡುವ ಗುರಿ ಹೊಂದಿದೆ. ರಾಜ್ಯದಲ್ಲಿ ಈಗಾಗಲೇ 1 ಲಕ್ಷ ಸದಸ್ಯರು ಹೆಸರು ನೋಂದಾಯಿಸಿದ್ದು, ಶೇ 50 ರಷ್ಟು ಮಂದಿಗೆ ಸದಸ್ಯತ್ವ ನೀಡಿದ್ದು, ಶೇ 50 ರಷ್ಟು ಅರ್ಜಿ ಪರಿಶೀಲನೆ ಬಾಕಿ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ 58000 ಕ್ಕೂ ಹೆಚ್ಚು ಬೂತ್ ಇದ್ದು, ಪ್ರತಿ ಬೂತ್ ನಿಂದ 100 ಸದಸ್ಯರಿಗೆ ಸದಸ್ಯತ್ವ ನೀಡುವ ಗುರಿ ಇದೆ. ಇದಕ್ಕಾಗಿ ಜಿಲ್ಲೆಯ 6 ಕೇಂದ್ರ ರಚಿಸಲಾಗಿದೆ ಎಂದು ತಿಳಿಸಿದರು.
ಆನ್ ಲೇನ್ ಸದಸ್ಯತ್ವ ಅಭಿಯಾನಕ್ಕೆ ಆದ್ಯತೆ ನೀಡಿದ್ದು, ಫಾರ್ಮ್ ಆಧಾರಿತ ಸದಸ್ಯತ್ವಕ್ಕೂ ಅವಕಾಶ ಇದೆ. ಆನ್ ಲೈನ್ ಸದಸ್ಯರಾಗಲು ಹೆಸರು, ಮೊಬೈಲ್ ನಂಬರ್, ವೋಟರ್ ಐಡಿ, ಪೊಟೊ ಮಾಹಿತಿ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನದ ಸಂಚಾಲಕ ವೆಂಕಟೇಶ್ ಛತ್ತಿಸ್ ಘಡ, ಸಂಚಾಲಕ ಮೋತಿಲಾಲ್ ದೇವಾಂಗನ್, ಸೂರಜ್, ಜಿಲ್ಲಾಧ್ಯಕ್ಷ ಭೀಮಣ್ಣನಾಯ್ಕ ಇತರರು ಇದ್ದರು.
ವಿಸ್ಮಯ ನ್ಯೂಸ್ ಶಿರಸಿ