ಅಂಕೋಲಾ: ತಾಲೂಕಿನ – ಬಾಳೆಗುಳಿ (ಅಲಗೇರಿ ಕ್ರಾಸ್ ) ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಬಡಿದು ಕಾಡು ಹಂದಿಯೊಂದು ಮೃತ ಪಟ್ಟ ಘಟನೆ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ಕುಮಟಾ ನಾಡು ಮಾಸ್ಕೇರಿ ನಿವಾಸಿ ವಿನೋದ ಗೌಡ ಎಂಬಾತನ ಮೇಲೆ ಅರಣ್ಯ ಇಲಾಖೆ ವತಿಯಿಂದ ಮೊಕದ್ದಮೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಸಾಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನುಗ್ಗಿದ ಕಾಡು ಹಂದಿಗೆ ಕಾರು ಬಡಿದ ಪರಿಣಾಮ ಸ್ವಲ್ಪ ದೂರದಲ್ಲಿ ಹಂದಿ ಮೃತಪಟ್ಟಿದೆ ಎನ್ನಲಾಗಿದೆ.
ಘಟನಾ ಸ್ಥಳದಿಂದ ಕಾಡು ಹಂದಿ ಮೃತ ದೇಹವನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಸಾಗಿಸಿ, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ,ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.ಕಾರು ಚಾಲಕ ವಿನೋದ ಗೌಡನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲೂ ಪ್ರತ್ಯೇಕ ದೂರು ದಾಖಲಾಗಿದ್ದು , ದಾರಿ ಮಧ್ಯೆ ಬಂದ ಕಾಡು ಪ್ರಾಣಿಗೆ ತಪ್ಪಿಸಲು ಹೋಗಿ ಡಿವೈಡರ್ ಗೆ ಗುದ್ದಿ ಅಪಘಾತ ಪಡಿಸಿ ಕಾರು ಜಖಂ ಆಗಲು ಕಾರಣನಾಗಿದ್ದಾನೆ ಎಂದು ಸಗಡಗೇರಿ ಗ್ರಾಮದ ನಿವಾಸಿ ಶ್ರೀಧರ ನಾಗು ಗೌಡ ಎನ್ನುವವರು ಪೋಲೀಸ್ ದೂರು ನೀಡಿದ್ದಾರೆ. ಆದರೆ ಅದೃಷ್ಟವಶಾತ್ ಈ ರಸ್ತೆ ಅಪಘಾತದಲ್ಲಿ ಭಾರೀ ಗಾತ್ರದ ಹಂದಿ ಮೃತ ಪಟ್ಟರೂ, ಕಾರ್ ನಲ್ಲಿದ್ದವರಿಗೆ ಯಾವುದೇ ಗಾಯ-ನೋವುಗಳಾಗಿಲ್ಲ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.