ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಶಾರದಾ ಭಟ್ಟರಿಗೆ ಸನ್ಮಾನ

ಕುಮಟಾ: ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕøತೆ ಕೂಜಳ್ಳಿಯ ಶಾರದಾ ಭಟ್ಟರಿಗೆ ಸಾಹಿತ್ಯ ಪರಿಷತ್ತಿನಿಂದ ಗೌರವ ಸಮರ್ಪಣೆಯನ್ನು ‘ಸಾಧಕರ ಮನೆಯಂಗಳದಲ್ಲಿ ಸಾಹಿತ್ಯ ಪರಿಷತ್ತು’ ಕಾರ್ಯಕ್ರಮದ ಅಡಿಯಲ್ಲಿ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಶಸ್ತಿ ಬಂದಿರುವುದು ಅವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕುಮಟಾ ಘಟಕದ ಅಧ್ಯಕ್ಷ ಸುಬ್ಬಯ್ಯ ನಾಯ್ಕ ಮಾತನಾಡಿದರು.

ಕಸಾಪ ಪ್ರತಿನಿಧಿ ಸುರೇಶ್ ಭಟ್, ಸಮಾಜಸೇವೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತೊಡಿಗಿಸಿಕೊಂಡ ಶಾರದಾ ಭಟ್ ರವರ ಬದುಕು ಆದರ್ಶವಾದುದೆಂದರು. ಮಾತೃತ್ವ, ಭಾತೃತ್ವವನ್ನೇ ಜೀವನದುದ್ದಕ್ಕೂ ಪರಿಪಾಲಿಸುತ್ತಾ ಹಲವರಿಗೆ ಬದುಕಿನ ದಿಕ್ಸೂಚಿಯಂತಿದ್ದು ನಿವೃತ್ತಿ ನಂತರವೂ ಸಾಮಾಜಿಕ, ಸಾಹಿತ್ಯಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಇವರಿಗೆ ಪ್ರಶಸ್ತಿ-ಪುರಸ್ಕಾರ, ಸನ್ಮಾನಗಳು ಅರಸಿಕೊಂಡು ಬರುತ್ತಿರುವುದು ವಿಶೇಷವಾದುದೇನಲ್ಲ ಎಂದು ಕಸಾಪ ಮಾಜಿ ಅಧ್ಯಕ್ಷ ಎನ್.ಆರ್.ಗಜು ನುಡಿದರು. ಕವಯತ್ರಿ ಸಂಧ್ಯಾ ಭಟ್ಟ ಸ್ವಾಗತಿಸಿದರು. ಕಸಾಪದ ಪ್ರಮೋದ ನಾಯ್ಕ ವಂದಿಸಿದರು. ಕೃಷ್ಣಮೂರ್ತಿ ಭಟ್ಟ, ರೋಶಿನಿ ಭಟ್ಟ ಉಪಸ್ಥಿತರಿದ್ದರು.

Exit mobile version