ಶಿರಸಿ ಜಾತ್ರೆಗೆ ಬಂದು ಕಾಣೆಯಾದ ಇಬ್ಬರು ಮಕ್ಕಳು: ಪೊಲೀಸರ ನೆರವಿನಿಂದ ನಿರಾಳರಾದ ಪೋಷಕರು

ಶಿರಸಿ: ರಾಜ್ಯದ ಅತ್ಯಂತ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶಿರಸಿ ಜಾತ್ರೆಗೆ ಜನಸಾಗರವೇ ಹರಿದುಬರುತ್ತದೆ. ಈ ವೇಳೆ ಜಾತ್ರೆಗೆ ಆಗಮಿಸಿದವರು ತಮ್ಮ ವಸ್ತುಗಳನು ಕಳೆದುಕೊಳ್ಳುವುದು, ಸಣ್ಣ ಮಕ್ಕಳು ಪಾಲಕರಿಂದ ತಪ್ಪಿಸಿಕೊಂಡು, ಕಾಣೆಯಾಗುವುದು ಆಗಾಗ ಕೇಳಿಬರುತ್ತದೆ. ಹೌದು, ಶಿರಸಿ ಜಾತ್ರೆಗೆ ಪಾಲಕರೊಂದಿಗೆ ಆಗಮಿಸಿದ ಬೈಂದೂರಿನ 6 ನೇ ತರಗತಿ ಓದುತ್ತಿರುವ ಬಾಲಕರಾದ ಪವನ ಮತ್ತು ನಾಗಾರ್ಜುನ ಕಾಣೆಯಾಗಿದ್ದರು. ಈ ವೇಳೆ ಜಾತ್ರಾ ಗದ್ದುಗೆ ಹತ್ತಿರದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ನೆರವಿನಿಂದ ಪಾಲಕರನ್ನು ಪತ್ತೆಹಚ್ಚಿ ಜಾತ್ರಾ ಓ.ಪಿ ಯಲ್ಲಿ ಪಾಲಕರ ಮಾಹಿತಿ ಪಡೆದು ಪಾಲಕರಿಗೆ ಮಕ್ಕಳನ್ನು ಮರಳಿಸಲಾಯಿತು.

ಇದೇ ವೇಳೆ, ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರು ಹಣ ಮತ್ತು ಬ್ಯಾಗ್ ಕಳೆದುಕೊಂಡಿದ್ದರು. ಈ ವೇಳೆ, ದೇವಸ್ಥಾನದ ಹೊರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು, ಹಣ ಮತ್ತು ಬ್ಯಾಗ್ ಅನ್ನು ಕಳೆದುಕೊಂಡ ಭಕ್ತರಿಗೆ ಮರಳಿಸಿದ್ದಾರೆ. ಪೊಲೀಸರ ಈ ಕಾರ್ಯಕತ್ತೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ವ್ಯಕ್ತವಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version