ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಭಾರೀ ಗಾಳಿ- ಮಳೆಯಾಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ರಾಜ್ಯದ ಪ್ರಸಿದ್ಧ ಮಾರಿಜಾತ್ರೆಯಲ್ಲಿ ಪೇಟೆಯಲ್ಲಿ ಅಂಗಡಿಗಳೆಲ್ಲ ಅಸ್ತವ್ಯಸ್ತವಾಗಿದೆ. ಅಲ್ಲದೆ, ಮಳೆಗೂ ಮುನ್ನವೇ ಗುಡುಗು ಗಾಳಿ ಆರ್ಭಟಿಸಿದ್ದು, ಗದ್ದುಗೆಯ ಜಾತ್ರಾ ಚಪ್ಪರ ಹಾಗೂ ಸ್ವಾಗತ ಕಮಾನು ಹಾರಿಹೋಗಿದೆ.
ಸಂಜೆ ಗುಡುಗು, ಗಾಳಿ ಸಹಿತ ಮಳೆಯಾದ ಹಿನ್ನಲೆಯಲ್ಲಿ ಜಾತ್ರಾ ಪೇಟೆಯಲ್ಲಿದ್ದ ಜನರು, ಭಕ್ತರು ಕಂಗಾಲಾದರು. ಅಕಾಲಿಕಮಳೆಯಿಂದಾಗಿ ವ್ಯಾಪಾರಸ್ಥರಿಗೂ ಹಾನಿಯಾಗಿದೆ.
ಮಾರಾಟದ ವಸ್ತುಗಳಿಗೆ ಟಾರ್ಪಲ್ ಹೊದಿಸಿದ್ದರೂ ಕೂಡಾ ಜಾತ್ರಾ ಅಂಗಡಿಯಲ್ಲಿದ್ದ ಆಟಿಕೆ ಸಾಮಾನುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆಗಳು ಸ್ವಲ್ಪ ನೀರು ತಾಗಿ ಹಾನಿಯಾಗಿದೆ. ಅಂಗಡಿಗಳಿಗೆಲ್ಲ ನೀರು ನುಗ್ಗಿ ಹಾನಿಯಾಗಿದೆ.
ಇದೇ ವೇಳೆ ಜಾಯಿಂಟ್ ವೀಲ್ ತೊಟ್ಟಿಲು ಕಳಚಿಡಲಾಗಿದೆ. ತೊಟ್ಟಿಲಿನ ಭಾರಕ್ಕೆ ಮಳೆಯಿಂದಾಗಿ ಮಣ್ಣು ಕುಸಿಯುವ ಭೀತಿಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಳಚಿಡಲಾಗಿದೆ. ಸಿದ್ದಾಪುರದ ಹಲವಡೆ ಕೂಡಾ ಧಾರಾಕಾರವಾಗಿ ಮಳೆಯಾಗಿದೆ.
ವಿಸ್ಮಯ ನ್ಯೂಸ್ ಶಿರಸಿ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.